ಪೋಸ್ಟ್‌ಗಳು

#Bagalkot#PoliceCorruption#KarnatakaNews ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಾಗಲಕೋಟೆಯಲ್ಲಿ ಲಂಚ ಬಲೆ: ಇಬ್ಬರು ಪೊಲೀಸ್ ಸಿಬ್ಬಂದಿ ರೆಡ್‌ಹ್ಯಾಂಡ್ ಬಂಧನ

ಇಮೇಜ್
ಬಾಗಲಕೋಟೆ, ಏಪ್ರಿಲ್ 22: ಕೆರೂರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಒಬ್ಬರು ಸೇರಿ ₹1.70 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ನಡೆದಿದೆ. ಬೆಳಗಂಟಿ ಕೆರೂರ ಗ್ರಾಮದ ಮುತ್ತಪ್ಪ ಹುಲ್ಲಪ್ಪ ನಾಯ್ಕರ  ಏಪ್ರಿಲ್ 21ರಂದು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ಪ್ರಕಾರ, ಅವರ ಸ್ನೇಹಿತ ಶಂಕ್ರಪ್ಪ ಬೂದಿಹಾಳ ಅವರನ್ನು ಏಪ್ರಿಲ್ 17ರಂದು ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಮೋಟಾರ್‌ಸೈಕಲ್ (ಕೆಎ-29 ಇಸಿ-0914) ವಾಪಸು ಕೊಡಲು ಹಾಗೂ ಪ್ರಕರಣದಿಂದ ಬಿಡಿಸಲು ₹1,70,000 ಲಂಚ ಬೇಡಿಕೆಯಿಟ್ಟಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಏಪ್ರಿಲ್ 18ರಂದು ಅವರನ್ನು ಬಿಡುಗಡೆ ಮಾಡಿ, ಲಂಚದ ಹಣ ನೀಡುವಂತೆ ಒತ್ತಾಯ ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಪ್ರಿಲ್ 22ರಂದು ದಾಳಿ ನಡೆಸಿ, ಕೆರೂರ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಸಂತೋಷ ಬಿರಾದಾರರನ್ನು ಲಂಚ ಸ್ವೀಕರಿಸುವ ವೇಳೆ ಬಂಧಿಸಿದರು. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಸುರೇಶರೆಡ್ಡಿ ಎಂ.ಎಸ್., ಪಿಐಗಳಾದ ಬಿ.ಎ. ಬಿರಾದಾರ, ಎಂ.ಬಿ. ಬಿರಾದಾರ ಹಾಗೂ ...