ಉಪ ಚುನಾವಣೆ ಫಲಿತಾಂಶದ ದಿನ ಬಾಗಲಕೋಟೆಯಲ್ಲಿ ಹೋಳಿ ಸಂಭ್ರಮ: ಗೆಲುವು ಯಾರಿಗೆ?
ಬಾಗಲಕೋಟೆ: ಬಾಗಲಕೋಟ ಉಪ ಚುನಾವಣೆಯ ಮತದಾನ ಏಪ್ರಿಲ್ 9ರಂದು ನಡೆದಿದ್ದು, ಇದೀಗ ಎಲ್ಲರ ಕಣ್ಣು ಮೇ 4ರ ಫಲಿತಾಂಶದತ್ತ ನೆಟ್ಟಿದೆ. ಜಿಲ್ಲೆಯಾದ್ಯಂತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಫಲಿತಾಂಶದ ದಿನವನ್ನು ‘ರಾಜಕೀಯ ಹೋಳಿ’ಯಂತೆ ಕಾತರದಿಂದ ಕಾಯಲಾಗುತ್ತಿದೆ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಠಿಣ ಪೈಪೋಟಿ ಕಂಡುಬಂದಿದೆ. ವಿಶೇಷವಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕೆಲ ರಾಜಕೀಯ ವಲಯಗಳಲ್ಲಿ ಅವರಿಗೆ ಮುನ್ನಡೆ ಇದೆ ಎನ್ನುವ ವಿಶ್ಲೇಷಣೆಗಳೂ ಹರಿದಾಡುತ್ತಿವೆ. ಆದರೆ ಅಂತಿಮ ತೀರ್ಪು ಮತದಾರರದ್ದಾಗಿದ್ದು, ಫಲಿತಾಂಶದ ದಿನವೇ ನಿಜ ಸ್ಥಿತಿ ಬಹಿರಂಗವಾಗಲಿದೆ. ಮೇ 4ರಂದು ಫಲಿತಾಂಶ ಹೊರಬರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಬಣ್ಣದ ಹಬ್ಬದ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಗೆಲುವು ಸಾಧಿಸುವ ಪಕ್ಷದ ಕಾರ್ಯಕರ್ತರು ಬಣ್ಣ ಎರಚಿಕೊಂಡು ಸಂಭ್ರಮಾಚರಣೆ ನಡೆಸಲು ಸಜ್ಜಾಗಿರುವುದು ಈಗಾಗಲೇ ಗೋಚರಿಸುತ್ತಿದೆ. ಹೀಗಾಗಿ ‘ರಾಜಕೀಯ ಹೋಳಿ’ ಎಂಬ ಪದಪ್ರಯೋಗ ಸ್ಥಳೀಯವಾಗಿ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಬಾಗಲಕೋಟೆಯಲ್ಲಿ ಹೋಳಿ ಹಬ್ಬವು ವಿಶಿಷ್ಟ ಪರಂಪರೆ ಹೊಂದಿದ್ದು, ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇತ್ತೀಚೆಗೆ ಹೋಳಿ ಹಬ್ಬ ಮುಕ್ತಾಯಗೊಂಡಿದ್ದರೂ...