ಪೋಸ್ಟ್‌ಗಳು

ಜುಲೈ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಹನಗಳಿಗೆ ಜಿಪಿಆರ್‌ಎಸ್ ಹಾಗೂ ಪ್ಯಾನಿಕ್ ಬಟನ್ ಆದೇಶವನ್ನು ಹಿಂಪಡೆಯುವಂತೆ ಕರ್ನಾಟಕ ಚಾಲಕರ ಒಕ್ಕೂಟ ಒತ್ತಾಯ

ಇಮೇಜ್
ಬಾಗಲಕೋಟ :ಕರ್ನಾಟಕ ಚಾಲಕರ ಒಕ್ಕೂಟವತಿಯಿಂದ ಮಾತನಾಡಿದ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಂದಗಿಸಾಬ ಕೊಳ್ಳಿ  ವಾಹನಗಳಿಗೆ  ಜಿಪಿಆರ್‌ಎಸ್  ಪ್ಯಾನಿಕ್ ಬಟನ್ ಅಳವಡಿಸಲು ಸರ್ಕಾರದ ಆದೇಶವಾಗಿದ್ದು ಆದರೆ ಸಾರಿಗೆ ಇಲಾಖೆಯಲ್ಲಿ ವಾಹನಗಳ ಎಫ್‌ಸಿ ಮಾಡಲು ಹೋದಾಗ ಜಿಪಿಆರ್‌ಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ರೂ 14200/- ಶುಲ್ಕ ತೆಗೆದುಕೊಳ್ಳುತ್ತಿದ್ದು, ಮತ್ತು ಪಾಸಿಂಗ್ ಮಾಡಲು ರೂ 4000/- ಒಟ್ಟು ರೂ 18,700 ರಿಂದ 19000 ರೂಪಾಯಿಗಳನ್ನು  ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಬಡ ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದ್ದು, ಇದೊಂದು ವೈಜ್ಞಾನಿಕ ಆದೇಶವಾಗಿದ್ದು, ಬಡ ವಾಹನ ಚಾಲಕರಿಗೆ ಬಹಳ ತೊಂದರೆಯಾಗಿ ಹಣಕಾಸಿನ ಅಡಚಣೆ ಉಂಟಾಗುತ್ತದೆ. ಒಂದು ವೇಳೆ ಜಿಪಿಆರ್‌ಎಸ್ ಮತ್ತು ಫ್ಯಾನಿಕ್ ಬಟನ್ ಅಳವಡಿಸುವುದಾದರೆ ನಮ್ಮ ವಾಹನಗಳಿಗೆ ಏಳು ರಾಜ್ಯಗಳಿಗೆ ಒಂದೇ ಪರಮೆಂಟ್ ನೀಡಬೇಕು ಮತ್ತು ಶಕ್ತಿ ಯೋಜನೆಯನ್ನು ರದ್ದುಗೊಳಿಸಬೇಕು.             ನಮ್ಮ ಬೇಡಿಕೆಗಳು ಈ ರೀತಿ ಇದೆ  ಚಾಲಕರ ಸಂಘಟನೆಗಳು ಅಸಂಘಟಿತವಾಗಿದ್ದು ಅವುಗಳನ್ನು ಸಂಘಟಿತವ ವಲಯಕ್ಕೆ ಸೇರಿಸಬೇಕು, ಸರ್ಕಾರದಿಂದ ಕನಿಷ್ಠ 05 ಲಕ್ಷ ರೂಪಾಯಿಗಳವರೆಗೆ ಉಚಿತ ಅಪಘಾತ ವಿಮಾ ಸೌಲಭ್ಯ ಒದಗಿಸುತ್ತಿದೆ ಅದನ್ನು 10 ರಿಂದ 15 ಲಕ್ಷ ರೂಪಾಯಿಗಳವರೆಗೆ ನೀಡಬೇಕು, ಹೆವಿಬ್ಯಾಡ್ಜ್ ರಿನಿವಲ್ ಗಾಗಿ...

ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಬಸಮ್ಮ ಪಟ್ಟಣಶೆಟ್ಟಿ

ಇಮೇಜ್
ಇಳಕಲ್ :  ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಚೇತನ ಫೌಂಡೇಶನ್ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕನಕ ಭವನ ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ  ಕಾವ್ಯ ಸಮಾಾಗಮ ಕವನ ಸಂಕಲನ ಅನಾವರಣ ಬೇಂದ್ರೆ ನುಡಿಸಿರಿ ಪ್ರಶಸ್ತಿ ಕನಕ ಪ್ರಶಸ್ತಿ ಕಾವ್ಯ ಚೇತನ ಪ್ರಶಸ್ತಿ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.  ಈ ಭೋಗ ಸಮಾರಂಭದಲ್ಲಿ  ಇಲ್ಕಲ್ ನಗರದ ಅಂಗನವಾಡಿ ಶಿಕ್ಷಕಿ ಬಸಮ್ಮ ಪಟ್ಟಣಶೆಟ್ಟಿ ಇವರಿಗೆ ಶಿಕ್ಷಕರ ರತ್ನ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು. ಪ್ರಶಸ್ತಿ ಸ್ವೀಕಾರ ಮಾಡಿದ ಇವರಿಗೆ ಇಲ್ಕಲ್ ನಗರದ ಗಣ್ಯಮಾನ್ಯರು ಶುಭ ಹಾರೈಸಿದ್ದಾರೆ.

ತಿಮ್ಮಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ರಮೇಶ್ ಕೊಳ್ಳಾರ

ಇಮೇಜ್
ಬಾಗಲಕೋಟ : ತಾಲೂಕಿನ ತಿಮ್ಮಾಪುರ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಅಧ್ಯಕ್ಷರಾಗಿ 12ತಿಂಗಳು ಅವಧಿಯನ್ನು ಪೂರ್ಣಗೊಳಿಸಿದ ಸಂಗನಗೌಡ ರಾಮನಗೌಡ ಪಾಟೀಲ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನೆಲೆ ತಿಮ್ಮಾಪುರ ಗ್ರಾಮ  ಪಂಚಾಯಿತಿಯಲ್ಲಿ ಚುನಾವಣೆ ಅಧಿಕಾರಿಯದ ಹೇಮಾವತಿ ಸೂಲ್ಪಿ ಸಾಮಾನ್ಯ ಸಭೆ ಕರೆದು ನಾಮಪತ್ರ ಪರಿಶೀಲನೆ ಮಾಡಲಾಯಿತು. ತಿಮ್ಮಾಪುರ್ ಗ್ರಾಮ ಪಂಚಾಯಿತಿಯ 11 ಸದಸ್ಯರು ಸಭೆಗೆ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಇದ್ದುದರಿಂದ ಕಾಂಗ್ರೆಸ್‌ ಬೆಂಬಲಿತ ಸದ್ಯಸರಾದ ರಮೇಶ್ ಕೊಳ್ಳಾರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.                ಕಾಂಗ್ರೆಸ್ಸಿನ ಯುವ ಮುಖಂಡರಾದ ಉಮೇಶ್ ಮೇಟಿ , ಬಾಗಲಕೋಟೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಸವಂತಪ್ಪ ಮೇಟಿ, ಹನುಮಂತ ಪೂಜಾರಿ, ಶ್ರೀಕರ್ ದೇಸಾಯಿ,  ಇವರಿಗೆ ಹಾರ ತುರಾಯಿಗಳನ್ನು ಹಾಕಿ ಸಿಹಿ ಹಂಚಿ ಪಟಾಕಿ ಸಿಡಿಸಿ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ರಮೇಶ್ ಕೊಳ್ಳಾರ ಅವರನ್ನು ಸನ್ಮಾನಿಸಲಾಯಿತು.      ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ಕೊಳ್ಳಾರ ಗ್ರಾಮಗಳಿಗೆ ಕುಡಿಯುವ ನೀರಿನ ಪ್ರಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ...

ನ್ಯಾಷನಲ್ ಕಾಲೇಜು ವಾರ್ಷಿಕೋತ್ಸವ ಕಲೆ, ಸಂಸ್ಕೃತಿ, ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ: ಶಾಸಕ ಡಾ. ಉದಯ್ ಬಿ. ಗರುಡಾಚಾರ್

ಇಮೇಜ್
ಬೆಂಗಳೂರು, ಜು, 25; ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಕಲೆ, ಸಂಸ್ಕೃತಿ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಚಿಕ್ಕಪೇಟೆ ಶಾಸಕ ಡಾ. ಉದಯ್ ಬಿ. ಗರುಡಾಚಾರ್ ಹೇಳಿದ್ದಾರೆ.   ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಭಿವ್ಯಕ್ತಿಗೆ ಪೂರಕ ವಾತಾವರಣವಿದೆ. ತಾವೂ ಸಹ ಇಲ್ಲಿಯೇ ಅಧ್ಯಯನ ಮಾಡಿದ್ದು, ಡಾ. ಎಚ್. ನರಸಿಂಹಯ್ಯ ಅವರ ವಿಚಾರಧಾರೆಗಳು ತಮ್ಮ ಮೇಲೆ ಅತ್ಯಂತ ಮಹತ್ವದ ಪ್ರಭಾವ ಬೀರಿವೆ. ಡಾ. ಎಚ್.ಎನ್. ಅವರು ವಿಜ್ಞಾನ ವೇದಿಕೆ, ನಾಟಕ ಸ್ಪರ್ಧೆ ಮತ್ತಿತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.         ಇಲ್ಲಿನ ಅಧ್ಯಾಪಕರು ಅತ್ಯುತ್ತಮ ರೀತಿಯಲ್ಲಿ ಪಾಠ ಪ್ರವಚನಗಳನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು. ಕಾಲೇಜಿಗೆ ಕೀರ್ತಿ ತರಬೇಕು ಎಂದು ಡಾ. ಉದಯ್ ಗರುಡಾಚಾರ್ ಕಿವಿ ಮಾತು ಹೇಳಿದರು.            ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಮಣ್ಯ, ಕಾರ್ಯದರ್ಶಿಗಳಾದ ವೆಂಕಟಶಿವಾರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸುಧಾಕರ್ ಇಸ್ತೂರಿ, ಪ್ರಾಂಶುಪಾಲರಾದ...

ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವೈಭವದ ಗುರುಪೂರ್ಣಿಮೆ ಸಿದ್ದತೆ: ಹೂವುಗಳು ಹಾಗೂ ಹಣ್ಣುಗಳಿಂದ ವೈಭವದ ಸಿಂಗಾರ

ಇಮೇಜ್
ಬೆಂಗಳೂರು ,  ಜುಲೈ  20:   ವಿಶೇಷ ಅಲಂಕಾರಕ್ಕೆ ಹಾಗೂ ಪೂಜೆಗೆ ಪ್ರಸಿದ್ದಿಯಾಗಿರುವ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ  ವಿಶೇಷವಾಗಿ ಗುರುಪೂರ್ಣಿಮೆ ಆಚರಿಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ  8  ಗಂಟೆಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಲೋಕರಾಜು ತಿಳಿಸಿದ್ದಾರೆ.   ಪ್ರತಿವರ್ಷದಂತೆ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸುತ್ತಿದ್ದು ,  ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿದೆ. ಬಾಬಾರ ‘’ಸಬ್ ಕಾ ಮಾಲೀಕ್ ಏಕ್ ಹೇ’’ ಎಂಬ ಪರಿಕಲ್ಪನೆಯಡಿ ಬಡವ ,  ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ವಿವಿಧ ಹಣ್ಣುಗಳು ,  ವಿಶೇಷ ಹೂವುಗಳಿಂದ ದೇವಸ್ಥಾನವನ್ನು ಆಲಂಕರಿಸಲಾಗಿದೆ ಎಂದು ತಿಳಿಸಿದರು.    ಅಭಿಷೇಕ ,  ಆಲಂಕಾರ ,  ಸಾಯಿ ಮಂತ್ರ ಹೋಮ ,  ಸುದರ್ಶನ ಹೋಮ ,  ದತ್ತಾತ್ರೇಯ ಹೋಮ ಸೇರಿದಂತೆ ಇನ್ನಿತರ ಪೂಜೆಗಳನ್ನು ಆಯೋಜಿಸಲಾಗಿದ್ದು ,  ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಪಡೆಯುವಂತೆ ಟ್ರಸ್ಟಿಗಳಾದ ಧನರಾಜ...

ಡಿಜಿಟಲ್‌ ಯುಗದಲ್ಲಿ ಆನಿಮೇಷನ್‌ ಹಾಗೂ ಗ್ರಾಫಿಕ್ಸ್‌ಗೆ ವಿಫುಲ ಉದ್ಯೋಗಾವಕಾಶ: ಖ್ಯಾತ ಸಿನೆಮಾಟೋಗ್ರಾಫರ್‌ ಮನೋಜ್‌ ಪರಮಹಂಸ-

ಇಮೇಜ್
ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಬಿಎಸ್ಸಿ ಆನಿಮೇಷನ್‌ ವಿಭಾಗ ಹಾಗೂ ಕೋರ್ಸ್‌ ಉದ್ಘಾಟನೆ ಬೆಂಗಳೂರು ಜುಲೈ 20: ಇಂದಿನ ಡಿಜಿಟಲ್‌ ಯುಗದಲ್ಲಿ ತ್ರೀಡಿ, ಆನಿಮೇಷನ್‌ ಹಾಗೂ ಗ್ರಾಫಿಕ್ಸ್‌ ಪರಿಣಿತರಿಗೆ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಖ್ಯಾತ ಸಿನೆಮಾಟೋಗ್ರಾಫರ್‌ ಮನೋಜ್‌ ಪರಮಹಂಸ ತಿಳಿಸಿದರು.ಇಂದು ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ಬಿಎಸ್ಸಿ ಆನಿಮೇಷನ್‌ ವಿಭಾಗ ಹಾಗೂ ಕೋರ್ಸ್‌ ಉದ್ಘಾಟಿಸಿ ಅವರು ಮಾತನಾಡಿದರು.       ಬಹಳಷ್ಟು ಕ್ರಿಯಾತ್ಮಕ ಕಾರ್ಯಚಟುವಟಿಕೆಗಳ ಸಾಧ್ಯತೆಗಳನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಕಳೆದೊಂದು ದಶಕದ ಡಿಜಿಟಲ್‌ ವಾತಾವರಣದಲ್ಲಿ ಅನಿಮೇಷನ್‌, ತ್ರೀಡಿ, ಗ್ರಾಫಿಕ್ಸ್‌ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳನ್ನು ನಾವು ಕಾಣಬಹುದಾಗಿದೆ. ಮೊದಲು ಕೇವಲ ಸಣ್ಣ ಪ್ರಮಾಣದಲ್ಲಿ ನಮ್ಮ ಜೀವನದ ದಿನನಿತ್ಯದ ಚಟುವಟಿಕೆಗಳಲ್ಲಿ ಇವುಗಳನ್ನು ಕಾಣಬಹುದಾಗಿತ್ತು. ಆದರೆ, ಇಂದು ಬಹುತೇಕ ಕಡೆಗಳಲ್ಲಿ ಇದನ್ನ ವ್ಯಾಪಕವಾಗಿ ಬಳಸುವಂತಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ, ಗೇಮಿಂಗ್‌, ಸೋಷಿಯಲ್‌ ಮೀಡಿಯಾ ಸೇರಿದಂತೆ ಹಲವಾರು ಕಡೆಗಳಲ್ಲಿ ಇನ್ನಷ್ಟು ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುತ್ತವೆ. ಇನ್‌ ಕ್ಯಾಮೆರಾ ವಿಷ್ಯೂಯಲ್‌ ಎಫೆಕ್ಟ್‌ ನಂತಹ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿದ್ದು, ಎಐ ತಂತ್ರಜ್ಞಾನದ ಅಳವಡಿಕೆಯಿಂದ ಇನ್ನಷ್...

ಮೆಲ್ಬ್ರೋ ಶುಗರ್ಸ ಪ್ರಾವೇಟ್ ಲಿಮಿಟೆಡ್ ವತಿಯಿಂದ ಎಂಪಿಎಸ್ ಶಾಲೆಗೆ ಲ್ಯಾಪ್ಟಾಪ್ ವಿತರಣೆ

ಇಮೇಜ್
ಬಾಗಲಕೋಟೆ: ತಾಲೂಕಿನ ಬೆನಕಟ್ಟಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿ ಶಾಲೆಗೆ  ಉಚಿತವಾಗಿ ಕೊಡುಗೆ ನೀಡಿದ ಮೇಲ್ಬ್ರೋ ಶುಗರ್ಸ್  ಪ್ರಾವಟ್  ಲಿಮಿಟೆಡ್ ನ ಉಪಾಧ್ಯಕ್ಷರಾದ ಚಂದ್ರಶೇಖರ್ ಹುಬ್ಬಳ್ಳಿಯವರು  ಶಾಲೆಗೆ ವಿದ್ಯಾರ್ಥಿಗಳಿಗೆ ನೂತನ ಪ್ರಾಜೆಕ್ಟ್ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ  ಉಚಿತವಾಗಿ ಲ್ಯಾಪ್ಟಾಪ್  ವಿತರಣೆ ಮಾಡಿದರು. ವಿತರಣೆ ಮಾಡಿ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ಅನುಕೂಲಕರವಾಗಲಿ  ಎಂದು ಮಾತನಾಡಿದರು. ಶಾಲೆಯ  ಎಸ್ ಡಿ ಎಂ ಸಿ  ಅಧ್ಯಕ್ಷ  ಮಾಂತಗೌಡ ಪಾಟೀಲ್  ಅವರು ಮೇಲ್ಬ್ರೋ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ಉಪಾಧ್ಯಕ್ಷರಾದ ಚಂದ್ರಶೇಖರ್ ಅವರನ್ನು ಶಾಲಾವತಿಯಿಂದ ಸನ್ಮಾನಿಸಿ ಗೌರವಿಸಿದರು. ಶಿಕ್ಷಕ ಪಾಂಡುರಂಗ ಸಣ್ಣಪ್ಪನವರ್ ಸ್ವಾಗತಿಸಿದರು.     ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಚಂದ್ರಶೇಖರ್ ಬಾಳಕನವರ, ಗಣ್ಯರಾದ ಅಶೋಕ ಮೇಳ್ಳಿ  ಹನಮಂತ ಅಮಾತೆಪ್ಪನವರ, ಯಲ್ಲಪ್ಪ ಬೆನ್ನೂರ್, ಗ್ರಾಪಂ ಸದಸ್ಯ ವಿನೋದ ನಾಯಕ, ವಿಕೆಪಿಎಸ್‌ಸಿ ಸದಸ್ಯ ರಾಘು ಯಡಹಳ್ಳಿ, ಶಾಲಾ ಮುಖ್ಯ ಗುರುಗಳಾದ ಜಗನ್ನಾಥ ಎಂ  ಪತ್ತಾರ, ಸಹ ಶಿಕ್ಷಕರಾದ ರವಿ ಕೆಂಚಣ್ಣವರ, ಡಾ!!ಪಿ ಡಿ ಸರ್ಕಾರ್  ಹಾಗೂ ಮೇಲ್ಬ್ರೋ ಶುಗರ್ಸ್  ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿಗಳಾದ ಪ್ರಶಾಂತ್ ಹಾಗೂ ಮಂಜು ಸೇರಿದಂತೆ...

07ನೇ ವೇತನ ಆಯೋಗದ ವರದಿ ಯಥಾವತ್ತು ಜಾರಿ-ಇಳಕಲ್ ನೌಕರರ ಸಂಘ ಹರ್ಷ

ಇಮೇಜ್
  ಇಲಕಲ್ಲ :ರಾಜ್ಯ ಸರಕಾರಿ ನೌಕರರ ಬಹುದಿನಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾದ 07 ನೇ ವೇತನ ಆಯೋಗದ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ವಿಧಾನ ಮಂಡಲ ಅಧಿವೇಶನದಲ್ಲಿ ಯಥಾವತ್ತಾಗಿ ಜಾರಿ ಮಾಡಿದ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರ ತೀರ್ಮಾನಕ್ಕೆ ಇಳಕಲ್ ನೌಕರರ ತಾಲೂಕು ಘಟಕ ಹರ್ಷ ವ್ಯಕ್ತಪಡಿಸಿದೆ.   ಈ ಕುರಿತು ಇಳಕಲ್ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ ಮಾತನಾಡಿ,ಸಂಘದ ನಿರಂತರ ಹೋರಾಟದ ಪ್ರತಿಫಲವಾಗಿ ಹಾಗೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಿದ್ದ ನೌಕರರ  ಬ್ಲಾಕ್ ಮಹಾಸಮ್ಮೇಳನದಲ್ಲಿ ಕೊಟ್ಟ ಮಾತಿನಂತೆ 07 ನೇ ವೇತನ ಆಯೋಗದ ವರದಿಗೆ ಘನ ಸರಕಾರವು ಅಸ್ತು ಎಂದಿದೆ.ಇದರಿಂದ ರಾಜ್ಯದ 6 ಲಕ್ಷ ಸರಕಾರಿ ನೌಕರರು,ನಿವೃತ್ತ ನೌಕರರು,ನಿಗಮ ಮಂಡಳಿ,ಸ್ಥಳೀಯ ಸಂಸ್ಥೆ ನೌಕರರು ಸೇರಿದಂತೆ 10 ಲಕ್ಷಕ್ಕೂ ಅಧಿಕ ನೌಕರರ ವೇತನ ಹೆಚ್ಚಳ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ, ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ರವರಿಗೆ,ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಹಾಗೂ ಕಳೆದ ಜನೇವರಿ ಹಾಗೂ ಮೊನ್ನೆ ತಾಲೂಕಿನಲ್ಲಿ  ಹಕ್ಕೊತ್ತಾಯ ಮನವಿ ಸ್ವೀಕರಿಸಿ, ಮುಖ್ಯಮಂತ್ರಿಗಳಿಗೆ ನಮ್ಮ  ಪರವಾಗಿ ಒತ್ತಾಯ ಮಾಡಿದ ಹುನಗುಂದ ಕ್ಷೇತ್ರದ ಮಾನ್ಯ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ರವರಿಗೆ,ಸಂಪುಟದ ಎಲ್ಲಾ ಸಚಿವರುಗಳಿಗೆ,ರಾಜ್...

ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ: ಸತೀಶ್ ಜಾರಕಿಹೊಳಿ

ಇಮೇಜ್
  ಇದಕ್ಕೆ ವಿಧಾನಸಭೆ, ಲೋಕಸಭೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ ಬೆಂಗಳೂರಿನಲ್ಲಿ ಕೆಪಿಸಿಸಿ ಪರಿಶಿಷ್ಟ ವಿಭಾಗದ ರಾಜ್ಯ ಕಚೇರಿ ಉದ್ಘಾಟನೆ  ಬೆಂಗಳೂರು ಜುಲೈ 16, 2024: ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ ಎಂಬುದಕ್ಕೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.       ಕ್ವೀನ್ಸ್  ರಸ್ತೆಯಲ್ಲಿರುವ ಕೆಪಿಸಿಸಿ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಕೆಪಿಸಿಸಿ ಪರಿಶಿಷ್ಟ ವಿಭಾಗ ರಾಜ್ಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯದಲ್ಲಿ ಉತ್ತಮ ಸಂಘಟನೆ ಮಾಡಿದ್ದಾರೆ. ಇದರ ಪ್ರತಿಫಲವಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿಕ್ಕೆ ಬಂದಿದ್ದಲ್ಲದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವಂತಾಯಿತು. ಅದರಲ್ಲೂ ಪರಿಶಿಷ್ಟ ವಿಭಾಗದ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವಲ್ಲಿ ಕೆಪಿಸಿಸಿ ಪರಿಶಿಷ್ಟ ವಿಭಾಗ ಯಶಸ್ವಿಯಾಗಿದೆ ಎಂದರು.     ಇತ್ತೀಚೆಗೆ ಬೀಳುತ್ತಿರುವ ಭಾರೀ ಮಳೆಯಿಂದ ರಾಜ್ಯಾದ್ಯಂತ ರಸ್ತೆ, ಸೇತುವೆಗಳು ಹಾನಿಗೊಳಗಾಗಿವೆ. ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ...

ಮತ ಹಾಕಿ ಸಂಭ್ರಮಿಸಿದ ನಂದವಾಡಗಿ ಶಾಲಾ ಮಕ್ಕಳು

ಇಮೇಜ್
ನಂದವಾಡಗಿ ೧೩: ಬಾಗಲಕೋಟೆ ಜಿಲ್ಲೆಯ ಹುನಗುಂದ/ಇಲಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿ ೨೦೨೪-೨೫ ನೇ ಸಾಲಿನ ಶಾಲಾ ಸಂಸತ್ತಿಗೆ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿನಿಯರಲ್ಲಿ ಸಂವಿಧಾನದ ಆಶಯ, ಮೌಲ್ಯಗಳನ್ನು ಹಾಗೂ ಚುನಾವಣೆ ಪರಿಕಲ್ಪನೆ, ಅದರ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಈ ಒಂದು ಚುನಾವಣೆಯನ್ನು ಕೈಗೊಳ್ಳಲಾಯಿತು. ಚುನಾವಣೆಯ ಅಧಿಸೂಚನೆ ಪ್ರಕಟಣೆ, ಉಮೇದುವಾರರಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಅಂತಿಮ ಉಮೇದುವಾರರ ಪ್ರಕಟ, ಚಿಹ್ನೆ ನೀಡುವುದು, ಮತದಾನ ಪ್ರಕ್ರಿಯೆ, ಬೆರಳಿಗೆ ಮಸಿ ಹಚ್ಚುವ ಪ್ರಕ್ರಿಯೆಯವರೆಗೆ ಯಶಸ್ವಿ ಚುನಾವಣೆಯನ್ನು ನೆರವೇರಿಸಲಾಯಿತು. ಹೀಗೆ ಹಲವು ಹಂತಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.        ಈ ಒಂದು ಚುನಾವಣೆಯಲ್ಲಿ ೨೦ ವಿದ್ಯಾರ್ಥಿನಿಯರು ನಾಮಪತ್ರ ಸಲ್ಲಿಸಿ, ಸ್ಪರ್ಧೆಯಲ್ಲಿ ಇದ್ದರು. ಅತ್ಯಂತ ಯಶಸ್ವಿಯಾಗಿ, ಅಚ್ಚುಕಟ್ಟಾಗಿ ಚುನಾವಣೆ ಮಾಡುವುದರ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರು ತಮ್ಮ ಗುರುತಿನ ಪತ್ರ ತೋರಿಸಿ,ಮತ ಹಾಕಿ ಸಂಭ್ರಮಿಸಿದರು. ಮತದಾನ ಪ್ರಕ್ರಿಯೆ ನಂತರ ಫಲಿತಾಂಶವನ್ನು ಘೋಷಣೆ ಮಾಡಲಾಯಿತು. ೯ ವಿದ್ಯಾರ್ಥಿಗಳು ಶಾಲಾ ಸಂಸತ್ತಿಗೆ ಆಯ್ಕೆಯಾದರು. ಕುಮಾರಿ ಯಾಸ್ಮಿನ್ ಹೂಲಗೇರಿ, ಅಪ...

ಎಲ್‌ಜಿಬಿಟಿಕ್ಯೂ ಈಕ್ವಾಲಿಟಿ ಪ್ರೈಡ್ ಮ್ಯಾರಾಥಾನ್‌ ಉದ್ಘಾಟಿಸಿದ ಸಚಿವ ದಿನೇಶ್ ಗುಂಡೂರಾವ್

ಇಮೇಜ್
ಬೆಂಗಳೂರು ,  ಜುಲೈ  13, 2024:   ತೃತೀಯ ಲಿಂಗಿಗಳು ,  ಸಲಿಂಗ ಕಾಮಿಗಳನ್ನೊಳಗೊಂಡ ಎಲ್ ಜಿಬಿಟಿಕ್ಯೂ ಸಮುದಾಯದ ಕುರಿತು ನಕಾರಾತ್ಮಕ ಧೋರಣೆಗಳನ್ನು ಹೊಂದದೆ ಅವರನ್ನು ಮುಖ್ಯ ವಾಹಿನಿಗೆ ಕರೆತರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.   ಎಲ್ ಜಿಬಿಟಿಕ್ಯೂ ಸಮುದಾಯದ ಪರವಾಗಿರುವ ಇರೈವಿ ಚಾರಿಟೆಬಲ್ ಟ್ರಸ್ಟ್ ಮತ್ತು ನಮ್ಮ ಬೆಂಗಳೂರು ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಆವೃತ್ತಿಯ ಎಲ್‌ಜಿಬಿಟಿಕ್ಯೂ ಈಕ್ವಾಲಿಟಿ ಪ್ರೈಡ್ ಮ್ಯಾರಾಥಾನ್‌ಅನ್ನು ಉದ್ಘಾಟಿಸಿ ಮಾತನಾಡಿದ ಅವರು ,  ಸಮುದಾಯದ ಬಗ್ಗೆಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಮ್ಯಾರಥಾನ್ ಸ್ವಾಗತಾರ್ಹ ಎಂದರು.   ತೃತೀಯ ಲಿಂಗಿಗಳು ಪ್ರಕೃತಿಯ ಸೃಷ್ಟಿಯಾದರೆ ,  ಸಲಿಂಗ ಕಾಮಿಗಳು ಸ್ವ ಇಚ್ಛೆಯಿಂದ ಎಲ್ ಜಿಬಿಟಿಕ್ಯೂ ಸಮುದಾಯಕ್ಕೆ ಸೇರಿದ್ದಾರೆ. ಇವರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿದ್ದು ,  ಸುಪ್ರೀಂ ಕೋರ್ಟ್ ಕೂಡ ಇವರ ಪರ ತೀರ್ಪು ನಾಡಿದೆ. ಆದರೆ ,  ಸಮಾಜ ಸಾಕಷ್ಟು ಮುಂದುವರಿದಿದ್ದರೂ ಜನರು ಮಾತ್ರ ಈ ಸಮುದಾಯವನ್ನು ತಿರಸ್ಕಾರ ಮನೋಭಾವ ಮತ್ತು ನಕಾರಾತ್ಮಕ ಧೋರಣೆಯಿಂದ ನೋಡುತ್ತಿದ್ದಾರೆ. ಇದನ್ನು ತಪ್ಪಿಸಿ ಅವರೂ ಸಮಾಜದ ಮುಖ್ಯ ವಾಹಿನಿಗೆ ಸೇರಿದವರು ಎಂದು ಪರಿಗಣಿಸುಂತಾಗಬೇಕು ಎಂದು ತಿಳ...

ಜನಸಂಖ್ಯಾ ಸ್ಪೋಟವು ಮಾರಕವಾಗದೆ ಪೂರಕವಾಗಲಿ : ಡಾ.ರಾಜೇಶ್ವರಿ ತೆಗ್ಗಿ

ಇಮೇಜ್
ಬಾಗಲಕೋಟ: ಭಾರತವು ಜನಸಂಖ್ಯೆಯಲ್ಲಿ ಜಗತ್ತಿನಲ್ಲೆ ಮೊದಲನೆಯ ಸ್ಥಾನವನ್ನು ಹೊಂದಿದೆ, ಇದರಿಂದ ನಮ್ಮ ಮಾನವ ಸಂಪನ್ಮೂಲ ಮಾರಕವಾಗದೆ, ಇಡಿ ಜಗತ್ತಿಗೆ ಪೂರಕವಾಗಲಿ ಎಂದು ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ರಾಜೇಶ್ವರಿ ತೆಗ್ಗಿ ಹೇಳಿದರು.       ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಎಲ್ಲ ಸಂಪನ್ಮೂಲ ಹೇರಳವಾಗಿದೆ, ಅದರಲ್ಲೂ ಮಾನವ ಸಂಪನ್ಮೂಲ ಇನ್ನು ಹೆಚ್ಚು ಇದೆ, ಜಗತ್ತಿನ ಪ್ರಮುಖ ಸಂಸ್ಥೆಯ ಮುಖ್ಯಸ್ಥರು ನಮ್ಮ ಭಾರತದವರೆ ಆಗಿದ್ದಾರೆ, ಇಡೀ ಜಗತ್ತಿಗೆ ನಮ್ಮ ದೇಶದ ತಂತ್ರಜ್ಞಾನ ನಾವು ಪೂರೈಸುತ್ತೀದ್ದೆವೆ. ಅದರ ಜೊತೆ ವಿದ್ಯಾರ್ಥಿಗಳು ವಿವಿಧ ಕೌಶಲಯತ ಆದಾಗ ಮಾತ್ರ ಜನಸಂಖ್ಯೆಯು ಮಾರಕವಾಗದೆ ಪೂರಕಾವಾಗುತ್ತೆದೆ ಎಂದು ಹೇಳಿದರು.           ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ಶಾಹಿನ ನದಾಫ, ಆನಂದ್ ಗೋಳಸಂಗಿ, ಹಾಗೂ ಸಚಿನ್ ಕುಮಾರ್ ಲಮಾಣಿ ಅವರು ವಿಶ್ವ ಜನಸಂಖ್ಯಾ ಕುರಿತು ಮಾತನಾಡಿದರು. ಸಾವಿತ್ರಿ ಶಹಾಪೂರ ಹಾಗೂ ಸಂಗಡಿಗರು ಜನಸಂಖ್ಯಾ ಸ್ಪೋಟದ ಕುರಿತು ಹಾಡನ್ನು ಹಾಡಿದರು. ನಂತರ ಜನಸಂಖ್ಯಾ ಸ್ಪೋಟದ ಜಾಗೃತಿ ಮೂಡಿಸುವ ನಾಟಕವನ್ನು ಪ್ರಶಿಕ್ಷಣಾರ್ಥಿಗಳು ಪ್ರದರ್ಶಿಸಿದರು.   ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಘಟಕ ಸಂಯೋಜಕರಾದ ಡಾ.ರಮೇಶ ಯಾನಮಶೆಟ್ಟಿ ...

ಏಳನೇ ವೇತನ ಆಯೋಗದ ವರದಿ ಜಾರಗೊಳಿಸಲು ಸರ್ಕಾರಿ ನೌಕರರ ಆಗ್ರಹ

ಇಮೇಜ್
ಇಲಕಲ್ಲ :ರಾಜ್ಯ ಸರಕಾರವು 07 ನೇ ವೇತನ ಆಯೋಗ ನೀಡಿದ ವರದಿಯನ್ನು ಯಥಾವತ್ತಾಗಿ ಜಾರಿಗೆ ಮಾಡುವುದು,ಹಳೇ ಪಿಂಚಣಿ  ಯೋಜನೆ ಜಾರಿಗೊಳಿಸುವುದು ಹಾಗೂ ನಗದುರಹಿತ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವಂತೆ ಇಳಕಲ್ ಹಾಗೂ ಹುನಗುಂದ ತಾಲೂಕುಗಳ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಹಾಗೂ ಸಂಗಣ್ಣ ಹಂಡಿ ನೇತೃತ್ವದ ಪದಾಧಿಕಾರಿಗಳು,ತಾಲೂಕಿನ ಸರ್ವ ಇಲಾಖೆಗಳ ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸರ್ಕಾರಿ ನೌಕರರ ಸಹಭಾಗಿತ್ವದೊಂದಿಗೆ ಹುನಗುಂದ ಮತಕ್ಷೇತ್ರದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇಲಕಲ್ಲದ ಶಾಸಕರ ಗೃಹ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಹಾಗೂ ಸಂಗಣ್ಣ ಹಂಡಿ, 07 ನೇ ವೇತನ ಆಯೋಗ ನೀಡಿದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸುವುದು,ಈಗಾಗಲೇ ಸರಕಾರ ನೀಡಿರುವ ಶೇ 17% ಮಧ್ಯಂತರ ಪರಿಹಾರದೊಂದಿಗೆ ಆಯೋಗ ನೀಡಿದ ವರದಿಯನ್ನು ಜಾರಿಗೆಗೊಳಿಸುವುದು ಹಾಗೂ ನೌಕರರಿಗೆ ಮಾರಕವಾಗಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಹಾಗೂ ಸರಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ವರ್ಗದವರಿಗೆ ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲು ಮಾನ್ಯ ಸರ್ಕಾರಕ್ಕೆ ಒತ್ತಾಯಿಸಿ ಅಧಿವೇಶನದಲ್ಲಿ ಧ್ವನಿ ಎತ್ತಲು ಮಾನ್ಯ ಶಾಸಕರಿಗೆ...