ವಾಹನಗಳಿಗೆ ಜಿಪಿಆರ್‌ಎಸ್ ಹಾಗೂ ಪ್ಯಾನಿಕ್ ಬಟನ್ ಆದೇಶವನ್ನು ಹಿಂಪಡೆಯುವಂತೆ ಕರ್ನಾಟಕ ಚಾಲಕರ ಒಕ್ಕೂಟ ಒತ್ತಾಯ
ಬಾಗಲಕೋಟ :ಕರ್ನಾಟಕ ಚಾಲಕರ ಒಕ್ಕೂಟವತಿಯಿಂದ ಮಾತನಾಡಿದ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಂದಗಿಸಾಬ ಕೊಳ್ಳಿ ವಾಹನಗಳಿಗೆ ಜಿಪಿಆರ್‌ಎಸ್ ಪ್ಯಾನಿಕ್ ಬಟನ್ ಅಳವಡಿಸಲು ಸರ್ಕಾರದ ಆದೇಶವಾಗಿದ್ದು ಆದರೆ ಸಾರಿಗೆ ಇಲಾಖೆಯಲ್ಲಿ ವಾಹನಗಳ ಎಫ್‌ಸಿ ಮಾಡಲು ಹೋದಾಗ ಜಿಪಿಆರ್‌ಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ರೂ 14200/- ಶುಲ್ಕ ತೆಗೆದುಕೊಳ್ಳುತ್ತಿದ್ದು, ಮತ್ತು ಪಾಸಿಂಗ್ ಮಾಡಲು ರೂ 4000/- ಒಟ್ಟು ರೂ 18,700 ರಿಂದ 19000 ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಬಡ
ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದ್ದು, ಇದೊಂದು ವೈಜ್ಞಾನಿಕ ಆದೇಶವಾಗಿದ್ದು, ಬಡ ವಾಹನ ಚಾಲಕರಿಗೆ ಬಹಳ ತೊಂದರೆಯಾಗಿ ಹಣಕಾಸಿನ ಅಡಚಣೆ ಉಂಟಾಗುತ್ತದೆ. ಒಂದು ವೇಳೆ ಜಿಪಿಆರ್‌ಎಸ್ ಮತ್ತು ಫ್ಯಾನಿಕ್ ಬಟನ್ ಅಳವಡಿಸುವುದಾದರೆ ನಮ್ಮ ವಾಹನಗಳಿಗೆ ಏಳು ರಾಜ್ಯಗಳಿಗೆ ಒಂದೇ ಪರಮೆಂಟ್ ನೀಡಬೇಕು ಮತ್ತು ಶಕ್ತಿ ಯೋಜನೆಯನ್ನು ರದ್ದುಗೊಳಿಸಬೇಕು.
ನಮ್ಮ ಬೇಡಿಕೆಗಳು ಈ ರೀತಿ ಇದೆ ಚಾಲಕರ ಸಂಘಟನೆಗಳು ಅಸಂಘಟಿತವಾಗಿದ್ದು ಅವುಗಳನ್ನು ಸಂಘಟಿತವ ವಲಯಕ್ಕೆ ಸೇರಿಸಬೇಕು, ಸರ್ಕಾರದಿಂದ ಕನಿಷ್ಠ 05 ಲಕ್ಷ ರೂಪಾಯಿಗಳವರೆಗೆ ಉಚಿತ ಅಪಘಾತ ವಿಮಾ ಸೌಲಭ್ಯ ಒದಗಿಸುತ್ತಿದೆ ಅದನ್ನು 10 ರಿಂದ 15 ಲಕ್ಷ
ರೂಪಾಯಿಗಳವರೆಗೆ ನೀಡಬೇಕು, ಹೆವಿಬ್ಯಾಡ್ಜ್ ರಿನಿವಲ್ ಗಾಗಿ ಆಯಾ ಜಿಲ್ಲೆಯಲ್ಲಿ ವ್ಯವಸ್ಥೆಯನ್ನು ಕಲ್ಪಿಸುವುದು, ಚಾಲಕರ ವರ್ಗಕ್ಕೆ ಪ್ರತ್ಯೇಕ ವಸತಿ ನಿಗಮ ಸ್ಥಾಪನೆ ಮಾಡಬೇಕು, ಏಳು ರಾಜ್ಯಗಳಿಗೆ ಒಂದೇ ಪರಮೆಂಟ್ ನೀಡಬೇಕು ಮತ್ತು ಜಾರಿಗೆ ತರಬೇಕೆಂದು ಕಲಾ ಭವನ್ ದಿಂದ ಜಿಲ್ಲಾ ಆಡಳಿತ ಕಚೇರಿಯ ವರಗೆ ಪ್ರತಿಭಟನೆ ಮಾಡುವುದರ ಮುಖಾಂತರ ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಂದಗಿಸಾಬ ಕೊಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸದ್ದಾಂ ಅತ್ತಾರ, ಜಿಲ್ಲಾ ಉಪಾಧ್ಯಕ್ಷ ರಾಮು ದಾಸಪ್ಪಗೋಳ, ರಾಜ್ಯ ಕಮಿಟಿ ಪ್ರಚಾರ ಸಮಿತಿ ಅಧ್ಯಕ್ಷರಾದ ಆನಂದ ಎರಡತ್ತಿ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು
ಅಡಿವೆಪ್ಪ ಸರೂರ
ಸಂಪಾದಕರು ಉದಯ ಲೋಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ