ತಮಿನಾಳ ನೆರೆ ಸಂತ್ರಸ್ತರ ನಿವೇಶನ ಹಂಚಿಕೆ: ಲೋಕಾಯುಕ್ತ ದಾಳಿ
ಬಾಗಲಕೋಟೆ: ಬದಾಮಿ ತಾಲೂಕಿನ ಗ್ರಾಮ ಪಂಚಾಯಿತಿ ಕಾತರಿಕಿ ಹದ್ದಿಯ ತಮಿನಾಳ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಬಾದಾಮಿ ತಹಶೀಲ್ದಾರ್ ಕಚೇರಿಗೆ ದಾಳಿ ನಡೆಸಿ ದಾಖಲೆಗಳ ಶೋಧ ಕಾರ್ಯ ಕೈಗೊಂಡಿದ್ದಾರೆ. 2009ರಲ್ಲಿ ಅತಿವೃಷ್ಟಿ ಹಾಗೂ ಮಲಪ್ರಭಾ ನದಿ ಪ್ರವಾಹದಿಂದ ತಮಿನಾಳ ಗ್ರಾಮದ 121 ಕುಟುಂಬಗಳು ನೆರೆ ಹಾವಳಿಗೆ ತುತ್ತಾಗಿದ್ದವು. 2011ರಲ್ಲಿ ಸಂತ್ರಸ್ತರಿಗಾಗಿ ನಿವೇಶನ ಹಂಚಿಕೆ ಮಾಡುವ ವೇಳೆ ಹೆಚ್ಚುವರಿಯಾಗಿ 25 ಮನೆಗಳನ್ನು ನಿರ್ಮಿಸಲಾಗಿದ್ದರೂ, 38 ನೆರೆ ಸಂತ್ರಸ್ತ ಕುಟುಂಬಗಳನ್ನು ಕೈಬಿಟ್ಟು ಸಂತ್ರಸ್ತರಲ್ಲದ 62 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರಿಂದ ಅಂದಾಜು ₹1.05 ಕೋಟಿ ಅವ್ಯವಹಾರ ನಡೆದಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಆಧಾರದ ಮೇಲೆ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ ಬಾದಾಮಿ ತಹಶೀಲ್ದಾರ್ ಕಚೇರಿಯಲ್ಲಿ ದಾಖಲೆಗಳ ಶೋಧನೆ ನಡೆಸಲು ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆಯಲಾಗಿದೆ. ಬಳಿಕ ಡಿವೈಎಸ್‌ಪಿ ಹಾಗೂ ಇಬ್ಬರು ಪೊಲೀಸ್ ನಿರೀಕ್ಷಕರನ್ನೊಳಗೊಂಡ ಲೋಕಾಯುಕ್ತ ತಂಡ ಕಚೇರಿಗೆ ತೆರಳಿ ಶೋಧ ಕಾರ...