ಪೋಸ್ಟ್‌ಗಳು

ಸೆಪ್ಟೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಚಿವ ತಿಮ್ಮಾಪೂರ ಕರೆ

ಇಮೇಜ್
ಬಾಗಲಕೋಟೆ:  ಪ್ರಭಾಪ್ರಭುತ್ವದ ಗಟ್ಟಿಗೊಳ್ಳಬೇಕಾದರೆ ಮತದಾನ ಮೌಲ್ಯದ ಮಹತ್ವವನ್ನು ಮನೆ ಮನೆಗೆ ತೆರಳಿ ಪ್ರತಿಯೊಂದು ಹಂತದಲ್ಲಿ ತಿಳಿಸುವ ಕಾರ್ಯವಾಗಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕರೆ ನೀಡಿದರು.               ಜಿಲ್ಲಾಡಳಿತ ಭವನದ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಭಾರತ ಇಂದು ಪ್ರಜಾಪ್ರಭುತ್ವದ ಅತೀ ದೊಡ್ಡ ದೇಶವಾಗಿದೆ ಎಂದರು.             ರಾಜ ಮಹಾರಾಜರ ಕಾಲದಲ್ಲಿ ರಾಜ ಮನೆತನದವರೇ ರಾಜ ನಾಗಬೇಕಿತ್ತು. ಆದರೆ ಈ ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಓರ್ವ ಸಾಮಾನ್ಯ ವ್ಯಕ್ತಿಯು ಸಹ ಈ ದೇಶದ ಪ್ರಧಾನ ಮಂತ್ರಿ, ರಾಜ್ಯದ ಮುಖ್ಯಮಂತ್ರಿಯಾಗಬಹುದು. ಅಂತಹ ಅದ್ಬುತವಾದ ಶಕ್ತಿ ನಮ್ಮ ಪ್ರಜಾಪ್ರಭುತ್ವಕ್ಕಿದೆ. ಭಾರತದ ಸಂವಿಧಾನ ವಿಶ್ವ ಶ್ರೇಷ್ಠ ಸಂವಿಧಾನವೆಂದು ಹೆಮ್ಮೆಯಿಂದ ಹೇಳುವಂತಹದ್ದಾಗಿದೆ. ರಾಜ್ಯದ ಬೀದರಿಂದ ಹಿಡಿದು ಚಾಮರಾಜನಗರದ ವರೆಗೆ ಮಾನವ ಸರಪಳಿ ನಿರ್ಮಿಸಲಾಗಿದೆ. ...

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

ಇಮೇಜ್
ಬಾಗಲಕೋಟೆ : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಒಬ್ಬ ಹುಡುಗ ಕಲ್ಲನ್ನು ಎಸೆದರೆ ಅದೂ ೧೦೦ಮೀಟರ್ ದೂರ ಹೋಗುತ್ತದೆ, ಅದೇ ಒಬ್ಬ ಸೈನಿಕ ಗುಂಡನ್ನು ಎಸೆದರೆ ೧೦೦೦ಮೀಟರ್ ದೂರ ಹೋಗುತ್ತದೆ, ಅದೇ ಒಬ್ಬ ಶಿಕ್ಷಕ ಹಸಿವಿನ ತುತ್ತನ್ನು ಎಸೆದಾಗ ಅದೂ ಸ್ವರ್ಗದ ಬಾಗಿಲನ್ನೂ ತೆರೆಯುತ್ತದೆ, ಎಂಬAತೆ ಜೀವನದಲ್ಲಿ ಎಲ್ಲ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು ಎಲ್ಲಾ ಮಕ್ಕಳೂ ಕೂಡ ಗುರುವನ್ನೂ ಗೌರವಿಸಿದಾಗ ಮಾತ್ರ ಒಬ್ಬ ಉತ್ತಮ ನಾಯಕನ ನಿರ್ಮಾಣ ಆಗುತ್ತದೆ ಎಂದು ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಆದ ಡಾ. ರಾಜೇಶ್ವರಿ ತೆಗ್ಗಿ ಅವರು ಹೇಳಿದರು. "ಜಗತ್ತು" ಎಂದು ಓದಲಾಗದ ಪುಸ್ತಕ, ಆದರೇ" ಬದುಕು" ಎಲ್ಲವನ್ನೂ ಕಲಿಸುವ ಶಿಕ್ಷಕ, ಒಂದು ಮಗು ತನ್ನ ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಶಿಕ್ಷಕರನ್ನೂ ಗೌರವಿಸಬೇಕು ಎಂದೂ ಕಾಲೇಜಿನ ಉಪನ್ಯಾಸಕರಾದ ರಾಘವೆಂದ್ರ ಕುಲಕರ್ಣಿ ತಮ್ಮ ಅನಿಸಿಕೆಗಳನ್ನು ವ್ಯಕ್ತಡಿಸಿದರು. ಕಾರ್ಯಕ್ರಮನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಉದ್ಘಾಟಿಸಲಾಯಿತು. ಚೈತ್ರ ರಾಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಅಕ್ಷತಾ ಅಂಗಡಿ ಹಾಗೂ ಸುಶ್ಮಿತಾ ಗಂಗಲ ಅವರು ಸ್ವಾಗತಿಸಿ ಪುಷ್ಪಿಸಿದರು. ಶಿಕ್ಷಕರ ದಿನಾಚರಣೆಯ ನಿಮಿತ್ಯವಾಗಿ ಆಯೋಜಿಸಲಾಗಿದ್ದ ಮನರಂಜನೆಯ ಕಾ...

ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ‌ ಮೇಟಿ

ಇಮೇಜ್
ಬಾಗಲಕೋಟೆ : ಸೆಪ್ಟೆಂಬರ 06  ಶಾಸಕರು ಹಾಗೂ ಬಿ.ಟಿ.ಡಿ.ಎ  ಅದ್ಯಕ್ಷರಾದ  ಎಚ್.ವಾಯ್.ಮೇಟಿ ಶುಕ್ರವಾರ 20 ಜನ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ ಮಾಡಿದರು.          ಬಿಟಿಡಿಎ ಸಭಾಭವನದಲ್ಲಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಗೊಂಡ ಸಂತ್ರಸ್ತರ ಪುನರ ವಸತಿ ಮತ್ತು ಪುನರ್‌ನಿರ್ಮಾಣಕ್ಕೆ ಬಿಟಿಡಿಎ ಕಟಿಬದ್ದವಾಗಿದೆ . ಮೂಲ ಸಂತ್ರಸ್ತರಿಗೆ ಮತ್ತು ಬಾಡಿಗೆದಾರಿಗೆ ಹಕ್ಕು ಪತ್ರ ನೀಡುವ ಮೂಲಕ ಹಂತ ಹಂತವಾಗಿ ಪ್ರತಿ ತಿಂಗಳು ಅರ್ಹ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಲಾಗುವುದೆಂದು ಹೇಳಿದರು.                 ಸಂದರ್ಭದಲ್ಲಿ ಮುಖ್ಯ ಅಭಿಯಂತರ ಬಸವರಾಜ, ಕಾರ್ಯನಿರ್ವಾಹಕ ಅಭಿಯಂತರ ವಿಜಯಶಂಕರ ಹೆಬ್ಬಳ್ಳಿ,ಎಸ್. ಎಸ್. ಡೊಳ್ಳಿ,ಪುನರ್ವಸತಿ ಅಧಿಕಾರಿ ಪ್ರಶಾಂತ ಬಾರಿಗಿಡದ ಉಪಸ್ಥಿತರಿದ್ದರು.