ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಬಾಗಲಕೋಟೆ : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಒಬ್ಬ ಹುಡುಗ ಕಲ್ಲನ್ನು ಎಸೆದರೆ ಅದೂ ೧೦೦ಮೀಟರ್ ದೂರ ಹೋಗುತ್ತದೆ, ಅದೇ ಒಬ್ಬ ಸೈನಿಕ ಗುಂಡನ್ನು ಎಸೆದರೆ ೧೦೦೦ಮೀಟರ್ ದೂರ ಹೋಗುತ್ತದೆ, ಅದೇ ಒಬ್ಬ ಶಿಕ್ಷಕ ಹಸಿವಿನ ತುತ್ತನ್ನು ಎಸೆದಾಗ ಅದೂ ಸ್ವರ್ಗದ ಬಾಗಿಲನ್ನೂ ತೆರೆಯುತ್ತದೆ, ಎಂಬAತೆ ಜೀವನದಲ್ಲಿ ಎಲ್ಲ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು ಎಲ್ಲಾ ಮಕ್ಕಳೂ ಕೂಡ ಗುರುವನ್ನೂ ಗೌರವಿಸಿದಾಗ ಮಾತ್ರ ಒಬ್ಬ ಉತ್ತಮ ನಾಯಕನ ನಿರ್ಮಾಣ ಆಗುತ್ತದೆ ಎಂದು ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಆದ ಡಾ. ರಾಜೇಶ್ವರಿ ತೆಗ್ಗಿ ಅವರು ಹೇಳಿದರು.
"ಜಗತ್ತು" ಎಂದು ಓದಲಾಗದ ಪುಸ್ತಕ, ಆದರೇ" ಬದುಕು" ಎಲ್ಲವನ್ನೂ ಕಲಿಸುವ ಶಿಕ್ಷಕ, ಒಂದು ಮಗು ತನ್ನ ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಶಿಕ್ಷಕರನ್ನೂ ಗೌರವಿಸಬೇಕು ಎಂದೂ ಕಾಲೇಜಿನ ಉಪನ್ಯಾಸಕರಾದ ರಾಘವೆಂದ್ರ ಕುಲಕರ್ಣಿ ತಮ್ಮ ಅನಿಸಿಕೆಗಳನ್ನು ವ್ಯಕ್ತಡಿಸಿದರು.
ಕಾರ್ಯಕ್ರಮನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಉದ್ಘಾಟಿಸಲಾಯಿತು. ಚೈತ್ರ ರಾಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಅಕ್ಷತಾ ಅಂಗಡಿ ಹಾಗೂ ಸುಶ್ಮಿತಾ ಗಂಗಲ ಅವರು ಸ್ವಾಗತಿಸಿ ಪುಷ್ಪಿಸಿದರು. ಶಿಕ್ಷಕರ ದಿನಾಚರಣೆಯ ನಿಮಿತ್ಯವಾಗಿ ಆಯೋಜಿಸಲಾಗಿದ್ದ ಮನರಂಜನೆಯ ಕಾರ್ಯಕ್ರಮದಲ್ಲಿ ವಿಜೇತರಾದ ಎಲ್ಲಾ ಶಿಕ್ಷಕರಿಗೂ ಸಾವಿತ್ರಿ ಶಹಾಪೂರ್ ಅವರು ಬಹುಮಾನಗಳನ್ನು ವಿತರಿಸಿದರು, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಯಾದ ಉಮಾ ಇಂಗಳಗಿ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಯಾದ ಮಮತಾಜ್ ಫಿರೋಜಿ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು,ಅಭಿಷೇಕ್ ಬಾರಕೆರ್ ಅವರು ನಿರೂಪಿಸಿದರು, ವಿಜಯಕುಮಾರ್ ಕೋಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಬೋಧಕ-ಬೋಧಕೇತರ ಸಿಂಬ್ಬAದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ