ಪೋಸ್ಟ್‌ಗಳು

ಮಾರ್ಚ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಪರ ವಾತಾವರಣ, ಉಮೇಶ್ ಮೇಟಿ ಗೆಲುವು ಖಚಿತ – ಬಲರಾಮ್ ಪವಾರ್

ಇಮೇಜ್
ಬಾಗಲಕೋಟೆ : ಉಪಚುನಾವಣೆಯ ಹಿನ್ನೆಲೆ ನೀಲಾನಗರ ತಾಂಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಬಲರಾಮ ಪವಾರ್ ಮಾತನಾಡಿ, ಬಂಜಾರ ಸಮಾಜದ ಮತಗಳು ಕಾಂಗ್ರೆಸ್ ಪರವಾಗಿ ಬರುತ್ತಿವೆ. ಬಾಗಲಕೋಟೆಯ ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿಯೂ ಕಾಂಗ್ರೆಸ್ ಪರವಾಗಿ ಮತಗಳು ಹಾಕಲಾಗುತ್ತವೆ ಎಂದು ಗ್ರಾಮೀಣ ಜನತೆ ಹಾಗೂ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು. ಈ ಎಲ್ಲಾ ಬೆಳವಣಿಗೆಗಳಿಂದ ಈ ಉಪಚುನಾವಣೆಯಲ್ಲಿ ಬಾಗಲಕೋಟೆಯಿಂದ ಉಮೇಶ್ ಮೇಟಿ ಗೆಲ್ಲುವುದು ಖಚಿತ. ನಮ್ಮ ಸರ್ಕಾರ “ ನುಡಿದಂತ ನಡೆದ ಸರ್ಕಾರ” ಆಗಿದ್ದು, ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿರುವುದರಿಂದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ. ಬಾಗಲಕೋಟೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಪರವಾಗಿ ಜನ ಮಾತನಾಡುತ್ತಿರುವುದು ಪಕ್ಷದ ಬಲವನ್ನು ತೋರಿಸುತ್ತಿದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಬಲರಾಮ್ ಪವಾರ್ ಹೇಳಿದ್ದಾರೆ. ತಾಲೂಕಿನ ವಿವಿಧ ತಾಂಡಾಗಳಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಬೆಂಬಲ ಸೂಚಿಸಿದ್ದು , ಇದು ಉಪಚುನಾವಣೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ನೀಡಲಿದೆ.

ಉಮೇಶ್ ಮೇಟಿ ಗೆಲುವು ಬಾಗಲಕೋಟೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ: ಆನಂದ್ ನ್ಯಾಮಗೌಡ

ಇಮೇಜ್
  ಬಾಗಲಕೋಟೆ: ಉಪಚುನಾವಣೆಯ ಹಿನ್ನೆಲೆ ನೀಲಾನಗರ ತಾಂಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ಆನಂದ್ ನ್ಯಾಮಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳ ಸಾಧನೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು . ಸಭೆಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಪಕ್ಷವಾಗಿದೆ. ಬಡವರು, ಮಹಿಳೆಯರು ಹಾಗೂ ಯುವಕರಿಗಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ,” ಎಂದು ಹೇಳಿದರು. ಶಕ್ತಿ ಯೋಜನೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 3.5 ಕೋಟಿ ಮಹಿಳೆಯರು ಗ್ಯಾರಂಟಿ ಯೋಜನೆ ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ದೊರೆಯುತ್ತಿದೆ. ಯುವನಿಧಿ ಯೋಜನೆ ಕುರಿತು ಅವರು, “ಉದ್ಯೋಗವಿಲ್ಲದ ಯುವಕರಿಗೆ ಧೈರ್ಯ ತುಂಬುವ ಉದ್ದೇಶದಿಂದ ತಿಂಗಳಿಗೆ ₹1500 ಮತ್ತು ₹3000 ಸಹಾಯಧನ ನೀಡಲಾಗುತ್ತಿದೆ,” ಎಂದು ಹೇಳಿದರು. ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಅನ್ನಭಾಗ್ಯ ಸೇರಿದಂತೆ ಇತರೆ ಯೋಜನೆಗಳು ಜನರ ಬದುಕಿಗೆ ಆಧಾರವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ವರ್ಷಕ್ಕೆ ಸುಮಾರು ₹58,000 ಕೋಟಿ ವೆಚ್ಚ ಮಾಡುತ್ತಿದ್ದು, ಬಡಜನರಿಗೆ ನೇರ ನೆರವು ನೀಡುತ್ತಿದೆ. ಇದು ಮ...

ಬಾಗಲಕೋಟೆ ಉಪಚುನಾವಣೆ: ಉಮೇಶ್ ಮೇಟಿ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ

ಇಮೇಜ್
ಬಾಗಲಕೋಟೆ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಜೀವನದಲ್ಲಿ ನೇರ ಬದಲಾವಣೆ ತಂದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಸುತಗುಂಡಾರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಅಪಪ್ರಚಾರಕ್ಕೆ ಜನರು ಕಿವಿಗೊಡಬಾರದು ಎಂದು ಹೇಳಿದರು. ದಿವಂಗತ ಎಚ್‌.ವೈ. ಮೇಟಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಕೈಗೊಂಡಿದ್ದು, ಅವರ ಸ್ಥಾನಕ್ಕೆ ಉಮೇಶ್ ಮೇಟಿ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಲಾಗಿದೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸಿಎಂ ಗ್ರಾಮಕ್ಕೆ ಆಗಮಿಸಿದ ವೇಳೆ ಮಹಿಳೆಯರು ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪೂರ, ಅಭ್ಯರ್ಥಿ ಉಮೇಶ್ ಮೇಟಿ, ಮಹಾದೇವಿ ಮೇಟಿ, ಶ್ರೀಕರ ದೇಸಾಯಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹಳ್ಳೂರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಮೇಟಿ ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಅವರ ಪುತ್ರ ಉಮೇಶ್ ಮೇಟಿ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು. ಸಚಿವ ಎಂ.ಬಿ. ಪಾಟೀಲ ಹಾಗೂ ಮಾಜಿ ಸಚಿವ ಅಜಯಕುಮಾರ್...

ಉಮೇಶ್ ಮೇಟಿವರ ಗೆಲುವು ಖಚಿತ: ಅಪ್ಪಾಜಿ ನಾಡಗೌಡ

ಇಮೇಜ್
ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಸೀತಿಮನಿ ಸ್ಟೇಷನ್ ಗ್ರಾಮದಲ್ಲಿ ಉಮೇಶ್ ಮೇಟಿ ಪರ ಮತಯಾಚನೆ ನಡೆಸಿದ ಅಪ್ಪಾಜಿ ನಾಡಗೌಡ ಅವರು, ಉಮೇಶ್ ಮೇಟಿ ಅವರ ಗೆಲುವು ಖಚಿತವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಪಚುನಾವಣೆಯ ಹಿನ್ನಲೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದಿವಂಗತ ಎಚ್‌.ವಿ. ಮೇಟಿ ಅವರನ್ನು ಜನಪರ, ಸರಳ ಹಾಗೂ ವಿಶ್ವಾಸಾರ್ಹ ನಾಯಕರೆಂದು ಸ್ಮರಿಸಿದರು. ಹಲವು ಹುದ್ದೆಗಳನ್ನು ವಹಿಸಿಕೊಂಡಿದ್ದರೂ ಅವರು ಅಧಿಕಾರದ ಅಹಂಕಾರದಿಂದ ದೂರವಿದ್ದು, ಎಲ್ಲಾ ಸಮುದಾಯದ ಜನರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿ ನಂಬಿಕೆ ಗಳಿಸಿದ್ದರು. “ ನಾನು ಮೇಟಿ ಸಾಹೇಬರ ಆರೋಗ್ಯ ವಿಚಾರಿಸಲು ಅವರ ಪಿ.ಎ. ಅವರಿಗೆ ಕರೆ ಮಾಡಿದಾಗ ಅವರು ಚೆನ್ನಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ ಬೆಳಿಗ್ಗೆ ಅವರನ್ನು ಭೇಟಿ ಮಾಡಲು ಹೋಗುವಷ್ಟರಲ್ಲಿ ಅವರ ನಿಧನದ ಸುದ್ದಿ ತಿಳಿದು ಬಂತು. ಅಂತಹ ನಾಯಕರನ್ನು ಕಳೆದುಕೊಂಡದ್ದು ನನ್ನಿಗೂ, ನಮ್ಮ ಪಕ್ಷಕ್ಕೂ ದೊಡ್ಡ ನಷ್ಟವಾಗಿದೆ” ಎಂದು ಅವರು ಭಾವುಕರಾಗಿ ಹೇಳಿದರು. ಮೇಟಿ ಅವರು ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುವ ನಾಯಕರು ಆಗಿದ್ದರು. ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದ್ದು, ಅವರ ಅಪೂರ್ಣ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಈಗ ಎಲ್ಲರ  ಮೇಲಿದೆ. ಈ ಹಿನ್ನೆ...

ಮೇಟಿ ಅವರ ಅಭಿವೃದ್ಧಿ, ಮಾನವೀಯತೆ ನೆನಪಿಸಿಕೊಳ್ಳಿ – ಸಂಯುಕ್ತ ಪಾಟೀಲ್ ಮನವಿ

ಇಮೇಜ್
ಬಾಗಲಕೋಟೆ : ಕ್ಷೇತ್ರದ ಅಭಿವೃದ್ಧಿಗೆ ಮೇಟಿ ಅವರು ಮಾಡಿದ ಕೆಲಸಗಳನ್ನು ನಾವು ಎಲ್ಲರೂ ನೆನಪಿಸಿಕೊಳ್ಳಬೇಕು ಎಂದು ಸಂಯುಕ್ತ ಪಾಟೀಲ್ ಹೇಳಿದರು. ತಾಲೂಕಿನ ಭಗವತಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ ಮೇಟಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಸುಧಾರಿಸಿದ್ದಾರೆ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯವಿದ್ದ ಕಡೆಗಳಲ್ಲಿ ಬದಲಾವಣೆಗಳನ್ನು ತಂದಿದ್ದಾರೆ. ಮೇಟಿ ಅವರ ವೈಯಕ್ತಿಕ ಸ್ವಭಾವವೂ ವಿಶೇಷವಾಗಿದ್ದು, ಮೊದಲ ಬಾರಿ ಚುನಾವಣೆಯ ಸಂದರ್ಭದಲ್ಲಿ ಮನೆಗೆ ಕರೆದುಕೊಂಡು ಆತಿಥ್ಯ ನೀಡಿದ ಘಟನೆಗಳನ್ನು ನೆನಪಿಸಿಕೊಂಡರು.  ಅವರ ಮನೆಗೆ ಬಂದ ಪ್ರತಿಯೊಬ್ಬರಿಗೂ ಊಟ, ಚಹಾ ವ್ಯವಸ್ಥೆ ಮಾಡಿ, ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುವ ಗುಣ ಅವರದ್ದು. ಯಾವ ವ್ಯಕ್ತಿಯೇ ಬಂದರೂ ‘ನಮ್ಮ ಊರವರು, ನಮ್ಮ ಜನ’ ಎಂಬ ಮನೋಭಾವದಿಂದ ನೋಡಿಕೊಳ್ಳುವ ನಾಯಕತ್ವ ಮೇಟಿ ಅಜ್ಜ ಅವರದ್ದಾಗಿದೆರು. ಇಂತಹ ಮಾನವೀಯತೆ ಎಲ್ಲ ಶಾಸಕರಲ್ಲಿಯೂ ಕಾಣುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಬಾಗಲಕೋಟೆ ಕ್ಷೇತ್ರದ ಜನರನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಅವರ ಪ್ರೀತಿ ಮತ್ತು ವಿಶ್ವಾಸವನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕಾಗಿ ಎಲ್ಲಾ ಕಾರ್ಯಕರ್ತರು ಮತ್ತು ಜನರ...

ಅಭಿವೃದ್ಧಿ ಹಾದಿ ಮುಂದುವರಿಸಲು ಉಮೇಶ್ ಮೇಟಿ ಗೆಲುವು ಅಗತ್ಯ: ರಾಹುಲ್ ಜಾರಕಿಹೊಳಿ

ಇಮೇಜ್
ಬಾಗಲಕೋಟೆ : ತಾಲೂಕಿನ ಬೇವೂರ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಜಾರಕಿಹೊಳಿ ಎಚ್. ವೈ. ಮೇಟಿ ಅವರ ಅವಧಿಯಲ್ಲಿ ಈ ಭಾಗದಲ್ಲಿ ನಿರಂತರವಾಗಿ ಜನಸೇವಾ ಕಾರ್ಯಗಳು ನಡೆದಿದ್ದೆ.ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹಾಗೂ ಸಾರ್ವಜನಿಕರ ಸಂತೋಷವನ್ನು ಸಾಧಿಸುವುದು ಮೇಟಿ ಅಜ್ಜ ಅವರ ಪ್ರಮುಖ ಗುರಿಯಾಗಿತ್ತು.  ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಈ ಅಭಿವೃದ್ಧಿ ಹಾದಿಯನ್ನು ಮುಂದುವರಿಸಲು ಎಲ್ಲರೂ ಒಂದಾಗಿ ಉಮೇಶ್ ಮೇಟಿ ಅವರನ್ನು ಗೆಲ್ಲಿಸಬೇಕು. ಮೇಟಿ ಅಜ್ಜ ಅವರು ಸಾರ್ವಜನಿಕರೊಂದಿಗೆ ಉತ್ತಮ ಸಂವಾದ ನಡೆಸಿ, ಜನರ ಅಗತ್ಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದಾರೆ. ತಂದೆಯವರಂತೆ ಉಮೇಶ್ ಮೇಟಿ ಕೂಡ ಉತ್ತಮ ಕಾರ್ಯಶೈಲಿಯಿಂದ ಸ್ಥಳೀಯ ಜನರ ವಿಶ್ವಾಸ ಗಳಿಸಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಸೇವೆ ಮುಂದುವರೆಯಲಿದೆ. ಮೇಟಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅವುಗಳನ್ನು ಮುಂದುವರಿಸಲು ಜನರ ಬೆಂಬಲ ಅಗತ್ಯವಿದೆ .  2023ರಲ್ಲಿ ನೀಡಿದ ಗ್ಯಾರೆಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಈಡೇರಿಸಿದ್ದು, ಜಾತಿ ಭೇದವಿಲ್ಲದೆ ಎಲ್ಲ ವರ್ಗದ ಜನರಿಗೆ ಸಮಾನವಾಗಿ ಯೋಜನೆಗಳ ಪ್ರಯೋಜನ ನೀಡಲಾಗಿದೆ. ...

ಬಿಲಕೇರೂರಿಗೆ ₹11.93 ಕೋಟಿ ಅನುದಾನ; ಬಿಲಕೇರೂರನಲ್ಲಿ ಬಿಜೆಪಿ ತೊರೆದು ಯುವಕರು ಕಾಂಗ್ರೆಸ್ ಸೇರ್ಪಡೆ

ಇಮೇಜ್
ಬಾಗಲಕೋಟೆ :ತಾಲೂಕಿನ ಬಿಲಕೇರೂರ ಗ್ರಾಮದಲ್ಲಿ ಮತಯಾಚನೆ ವೇಳೆ ಮಾತನಾಡಿದ ಉಮೇಶ್ ಮೇಟಿ, ಕಳೆದ ಮೂರು ವರ್ಷಗಳಲ್ಲಿ ಗ್ರಾಮ ಅಭಿವೃದ್ಧಿಗೆ ಒಟ್ಟು ₹11 ಕೋಟಿ 93 ಲಕ್ಷ ಅನುದಾನವನ್ನು ಮೇಟಿ ಸಾಹೇಬರು ಒದಗಿಸಿದ್ದಾರೆ. ಗ್ರಾಮದ ಮೂಲಸೌಕರ್ಯ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಗ್ರಾಮ ದೇವತೆ ದ್ಯಾಮವ್ವ ದೇವಸ್ಥಾನಕ್ಕೆ ₹20 ಲಕ್ಷ, ಮಲ್ಲಮ್ಮ ದೇವಸ್ಥಾನಕ್ಕೆ ₹20 ಲಕ್ಷ, ಶಾದಿವಾಲ್ ಅಭಿವೃದ್ಧಿಗೆ ಎರಡು ಹಂತಗಳಲ್ಲಿ ₹85 ಲಕ್ಷ, ಸಂಗಾಪುರ ಕ್ವಾಟಿ ದಾರಿ ಮೂರಂ ರಸ್ತೆಗೆ ₹55 ಲಕ್ಷ,ಬಿಲಕೇರೂರಿನಿಂದ ಅಚನೂರವರೆಗೆ ಡಾಂಬರ್ ರಸ್ತೆಗೆ ₹3 ಕೋಟಿ 80 ಲಕ್ಷ ಅನುದಾನ ಮಂಕಣಿ ದಾರಿ ಕಾಮಗಾರಿಗೆ ₹35 ಲಕ್ಷ, ಬಿಲಕೇರೂರ ಕ್ರಾಸ್ ಬಸ್ ನಿಲ್ದಾಣ ನಿರ್ಮಾಣಕ್ಕೆ ₹16 ಲಕ್ಷ, ಸಾಮಾಜಿಕ ಕಲ್ಯಾಣ ಇಲಾಖೆಯ ಹಾಸ್ಟೆಲ್ ದುರಸ್ತಿಗೆ ₹5 ಲಕ್ಷ, ಗಿರಿಜನ ಯೋಜನೆಯಡಿ ರಸ್ತೆ ತಡೆಗೋಡಿಗೆ ₹10 ಲಕ್ಷ ಹಾಗೂ ಸೇದು ಬಾವಿ ಹತ್ತಿರ ಸಿಸ್ಟೆನ್ ನಿರ್ಮಾಣಕ್ಕೆ ₹1 ಲಕ್ಷ ಅನುದಾನ ನೀಡಲಾಗಿದೆ. ಸಾಮಾನ್ಯ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ಹಾಗೂ ಬೋಡನಾಯಕದಿನ್ನಿ ಮೋರಂ ರಸ್ತೆಗೆ ₹5 ಲಕ್ಷ ಸಹ ಮೀಸಲಾಗಿದೆ.ಈ ಹಿಂದೆ ಪಶು ಚಿಕಿತ್ಸೆಗಾಗಿ ಗ್ರಾಮಸ್ಥರು ತಿಮ್ಮಾಪುರಕ್ಕೆ ತೆರಳಬೇಕಾಗುತ್ತಿತ್ತು. ಆದರೆ ಮೇಟಿ ಸಾಹೇಬರು ಗ್ರಾಮದಲ್ಲೇ ಪಶು ಚಿಕಿತ್ಸಾಲಯವನ್ನು ಮಂಜೂರು ಮಾಡಿಸಿ ಆರೋಗ್ಯ ಸೇವೆಯನ್...

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಇಮೇಜ್
  ಬಾಗಲಕೋಟೆ , ಫೆಬ್ರವರಿ 25: ಕರ್ನಾಟಕ ಪ್ರದೇಶ ಕುರುಬರ ಸಂಘ (ರಿ) ಬಾಗಲಕೋಟೆ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿದ್ದ ಡಿ.ಬಿ. ಸಿದ್ದಾಪುರರನ್ನು ಅವರ ಸ್ಥಾನದಿಂದ ವಿಮುಕ್ತಿಗೊಳಿಸಿರುವ ಕುರಿತು ಸಂಘದ ವತಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಂಘದ ಪ್ರಕಟಣೆಯ ಪ್ರಕಾರ , ಡಿ.ಬಿ.ಸಿದ್ದಾಪುರ   ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ನಿರೀಕ್ಷಿತ ಮಟ್ಟದ ಚಟುವಟಿಕೆ ತೋರದಿರುವುದಾಗಿ ಆರೋಪಿಸಲಾಗಿದೆ. ಜೊತೆಗೆ, ಅವರ ಅಧಿಕಾರಾವಧಿ ಈಗಾಗಲೇ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಸಂಘದ ನಿಯಮಾನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಈ ಸಂಬಂಧ ಫೆಬ್ರವರಿ 25, 2026ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದ್ದು, ಇನ್ನು ಮುಂದೆ ಸಿದ್ದಾಪುರರು ಬಾಗಲಕೋಟೆ ಜಿಲ್ಲಾ  ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಂಘದ ಹಿರಿಯ ಪದಾಧಿಕಾರಿಗಳು ಈ ನಿರ್ಧಾರವನ್ನು ಒಮ್ಮತದಿಂದ ಕೈಗೊಂಡಿದ್ದು, ಸಂಘದ ಸಂಘಟನೆ ಬಲಪಡಿಸುವುದು ಹಾಗೂ ಸಮಾಜದ ಅಭಿವೃದ್ಧಿಗೆ ಹೆಚ್ಚು  ಪ್ರಾಮುಖ್ಯತೆ ನೀಡುವುದು ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ  ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಸಂಘದ ಅಧ್ಯಕ್ಷರಾದ ಎಂ. ಈರಣ್ಣ, ಕಾರ...

“ಮೇಟಿ ಅವರ ಕನಸು ಮುಂದುವರಿಸಲು ಉಮೇಶ್ ಮೇಟಿ ಗೆ ಬೆಂಬಲ ನೀಡೋಣ”: ಮಲ್ಲು ದ್ಯಾವನ್ನವರ್

ಇಮೇಜ್
ಬಾಗಲಕೋಟೆ: ತಾಲೂಕಿನ ಆಲೂರು ತಾಂಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಲ್ಲು ದ್ಯಾವನ್ನವರ್ ಅವರು, ದಿವಂಗತ ಎಚ್‌.ವೈ.ಮೇಟಿ ಅವರ ಕನಸನ್ನು ಮುಂದುವರಿಸಲು ಉಮೇಶ್ ಮೇಟಿ ಅವರಿಗೆ ಬೆಂಬಲ ನೀಡಬೇಕು  ಎಚ್‌.ವೈ . ಮೇಟಿ ಅವರು ಅಗಲಿದ ಬಳಿಕದ ಈ ಉಪಚುನಾವಣೆ ಅನಿವಾರ್ಯವಾಗಿ ಎದುರಾಗಿದ್ದು, ಅವರ ಅಗಲಿಕೆಯ ನೋವು ಇನ್ನೂ ಕುಟುಂಬದವರಿಗೂ, ಅಭಿಮಾನಿಗಳಿಗೂ ಕಡಿಮೆಯಾಗಿಲ್ಲ.   ಮೇಟಿ ಅವರು ದೂರದೃಷ್ಟಿಯುಳ್ಳ ನಾಯಕರು ಆಗಿದ್ದು, ಉಮೇಶ್ ಮೇಟಿ ಅವರ ಮೇಲೆ ವಿಶೇಷವಾದ ವಿಶ್ವಾಸ ಹೊಂದಿದ್ದರು. ತಮ್ಮ ನಂತರ ರಾಜಕೀಯವಾಗಿ ಮುಂದುವರಿಯಬೇಕಾದವರು ಉಮೇಶ್ ಮೇಟಿ ಎಂಬ ನಂಬಿಕೆಯನ್ನು ಅವರು ಬಹಳ ಹಿಂದೆಯೇ ವ್ಯಕ್ತಪಡಿಸಿದ್ದರು   ಪಿ ಎಲ್ ಡಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿಯೂ “ಉಮೇಶ್ ಮುಂದುವರಿಯಬೇಕು” ಎಂದು ಮೇಟಿ ಅವರು ಹೇಳಿದ್ದನ್ನು ಉಲ್ಲೇಖಿಸಿದ ದ್ಯಾವನ್ನವರ್, ಅದು ಅವರ ದೂರದೃಷ್ಟಿಗೆ ಸಾಕ್ಷಿ ಅದೇ ವೇಳೆ ಉಮೇಶ್ ಮೇಟಿ ಅವರು ಹಿರಿಯರಿಗೆ ಗೌರವ ನೀಡಿ ತ್ಯಾಗದ ಮನೋಭಾವ ತೋರಿಸಿದ್ದರು. ಇಂದು ಪಕ್ಷದ ಎಲ್ಲಾ ಹಿರಿಯರು ಒಗ್ಗಟ್ಟಾಗಿ ಉಮೇಶ್ ಮೇಟಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು, ಮೇಟಿ ಅವರ ಕನಸನ್ನು ಮುಂದುವರಿಸುವ ನಿರ್ಧಾರವಾಗಿದೆ. ಮೇಟಿ ಅವರಿಗೆ ನೀಡಿದ ಪ್ರೀತಿ ಮತ್ತು ಬೆಂಬಲವನ್ನು ಅದೇ ರೀತಿಯಲ್ಲಿ ಉಮೇಶ್ ಮೇಟಿ ಅವರಿಗೆ ನೀಡಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ...

ಬೊಮ್ಮಣಗಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಇಮೇಜ್
ಬಾಗಲಕೋಟೆ: ವಿಧಾನಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಬೊಮ್ಮಣಗಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸೇರ್ಪಡೆ ಕಾರ್ಯಕ್ರಮ ಮಲ್ಲಿಕಾರ್ಜುನ ಚರಂತಿಮಠ ಹಾಗೂ ಬಸವಂತಪ್ಪ ಮೇಟಿ ಅವರ ನೇತೃತ್ವದಲ್ಲಿ ನಡೆಯಿತು. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರಲ್ಲಿ ಹನಮಂತ ಮಾದರ, ಸಂಗಪ್ಪ ಹುಲ್ಲಳ್ಳಿ, ಮಲ್ಲು ಕಾಳಿ, ಸಿರಾಜ್ ವಾಲಿಕಾರ, ಮಾಂತೇಶ ತಳವಾರ, ಯಲ್ಲನಗೌಡ ಗೌಡರ, ಹೊನ್ನಪ್ಪ ಬೊಮ್ಮಣಗಿ, ಸಂಕ್ರು ಮಾದರ ಹಾಗೂ ಶಿವಾನಂದ ಮಾದರ ಸೇರಿದಂತೆ ಹಲವರು ಸೇರಿದ್ದಾರೆ.

“ಮೇಟಿ ಅವರ ನೆನಪಿಗಾಗಿ ಒಗ್ಗಟ್ಟಿನಿಂದ ಗೆಲುವು ಸಾಧಿಸೋಣ”: ಎಸ್‌.ಜಿ. ನಂಜಯ್ಯನಮಠ

ಇಮೇಜ್
ಬಾಗಲಕೋಟೆ: ಸೀತಿಮನಿ ಗ್ರಾಮದ ಉಪಚುನಾವಣೆಯ ಹಿನ್ನಲೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಅವರು, ದಿವಂಗತ ಎಚ್.ವೈ . ಮೇಟಿ ಅವರ ನೆನಪಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಉಮೇಶ್ ಮೇಟಿ ಅವರನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕಳೆದ ಐದು ವರ್ಷಗಳ ಕಾಲ ಎಚ್.ವಿ. ಮೇಟಿ ಅವರು ಕ್ಷೇತ್ರವನ್ನು ಪ್ರತಿನಿಧಿಸಿ ಜನರ ವಿಶ್ವಾಸ ಗಳಿಸಿದ್ದರು. ಆದರೆ ಅವರ ಅಕಾಲಿಕ ನಿಧನದಿಂದ ಇಂದು ಉಪಚುನಾವಣೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಟಿ ಅವರು ಸರಳ, ಮಿತಭಾಷಿ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಅಜಾತ ಶತ್ರುವಾಗಿದ್ದರು. “ಬನ್ನಿ, ಕೂತ್ಕೊಳ್ಳಿ, ಚಹಾ ಕುಡಿಯಿರಿ” ಎಂದು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುವ ಅವರ ಗುಣ ಜನಮನಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ ಎಂದು ಅವರು ಸ್ಮರಿಸಿದರು. ಈ ಸಂದರ್ಭದಲ್ಲಿ ಮೇಟಿ ಕುಟುಂಬದವರಿಂದ ಉಮೇಶ್ ಮೇಟಿ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಲಾಗಿದ್ದು, ಪಕ್ಷದ ಹಲವು ನಾಯಕರು ಇದ್ದರೂ ಯಾರೂ ಟಿಕೆಟ್ ಕೇಳದೆ ತ್ಯಾಗದ ಮನೋಭಾವದಿಂದ ಒಗ್ಗಟ್ಟಿನ ನಿರ್ಧಾರ ಕೈಗೊಂಡಿರುವುದು ವಿಶೇಷವಾಗಿತು. “ನೀವು ಹೇಗೆ ಎಚ್.ವೈ.ಮೇಟಿ ಅವರನ್ನು ಗೆಲ್ಲಿಸುತ್ತಿದ್ದೀರೋ, ಅದೇ ರೀತಿ ಉಮೇಶ್ ಮೇಟಿ ಅವರಿಗೆ ಆಶೀರ್ವಾದ ನೀಡಿ ಗೆಲ್ಲಿಸಬೇಕು” ಎಂದು ಕಾರ್ಯಕರ್ತರು ಹಾಗೂ ಮತದಾರರಿಗೆ ಮನವಿ ಮಾ...

ಹಿರೇಮ್ಯಾಗೇರಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಇಮೇಜ್
ಬಾಗಲಕೋಟೆ: ವಿಧಾನಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಹಿರೇಮ್ಯಾಗೇರಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರಲ್ಲಿ ಅಶೋಕ್ ಸೂಡಿ, ಗೌಡಪ್ಪ ಕುಂಚುಗುನುರ್, ಶಬ್ಬೀರ್ ಜಮಾದಾರ, ಕುಮಾರ ಸೂಡಿ, ಸಿದ್ದಪ್ಪ ಸೂಡಿ, ಗಿರೀಶ್ ಪುಕ್ಕಾಳೆ, ಈರಪ್ಪ ಹಳದೂರ, ಪ್ರಕಾಶ್ ಸೂಡಿ, ಮಾಂತೇಶ ಮಳೆಗಾಮಿ, ಶಿವಸಂಗಪ್ಪ ಸೂಡಿ, ಶ್ರೀಶೈಲ್ ಹೂಗಾರ, ಬಸವರಾಜ್ ಬೆನಕಟ್ಟಿ, ಬಸಪ್ಪ ಬೂದಿಹಾಳ, ಶರೀಫ್ ಜಮಾದಾರ, ಬಸನಗೌಡ ಕಿರ್ಸೂರ್, ಶಿವಪ್ಪ ಕಿರ್ಸೂರ್, ರಾಮಣ್ಣ ಕಿರ್ಸೂರ್, ಒಲಿಸಾಬ್ ವಾಲಿಕಾರ, ದಾವಲ್ ಸಾಬ್ ಶೇಕ್, ವೀರೇಶ್ ಬೆನಕಟ್ಟಿ, ಶರೀಫ್ ಯರಗಲ ಹಾಗೂ ರವಿ ಬೆನಕಟ್ಟಿ ಸೇರಿದಂತೆ ಹಲವರು ಸೇರಿದ್ದಾರೆ.