ಉಮೇಶ್ ಮೇಟಿವರ ಗೆಲುವು ಖಚಿತ: ಅಪ್ಪಾಜಿ ನಾಡಗೌಡ

ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಸೀತಿಮನಿ ಸ್ಟೇಷನ್ ಗ್ರಾಮದಲ್ಲಿ ಉಮೇಶ್ ಮೇಟಿ ಪರ ಮತಯಾಚನೆ ನಡೆಸಿದ ಅಪ್ಪಾಜಿ ನಾಡಗೌಡ ಅವರು, ಉಮೇಶ್ ಮೇಟಿ ಅವರ ಗೆಲುವು ಖಚಿತವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆಯ ಹಿನ್ನಲೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದಿವಂಗತ ಎಚ್‌.ವಿ. ಮೇಟಿ ಅವರನ್ನು ಜನಪರ, ಸರಳ ಹಾಗೂ ವಿಶ್ವಾಸಾರ್ಹ ನಾಯಕರೆಂದು ಸ್ಮರಿಸಿದರು. ಹಲವು ಹುದ್ದೆಗಳನ್ನು ವಹಿಸಿಕೊಂಡಿದ್ದರೂ ಅವರು ಅಧಿಕಾರದ ಅಹಂಕಾರದಿಂದ ದೂರವಿದ್ದು, ಎಲ್ಲಾ ಸಮುದಾಯದ ಜನರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿ ನಂಬಿಕೆ ಗಳಿಸಿದ್ದರು.
ನಾನು ಮೇಟಿ ಸಾಹೇಬರ ಆರೋಗ್ಯ ವಿಚಾರಿಸಲು ಅವರ ಪಿ.ಎ. ಅವರಿಗೆ ಕರೆ ಮಾಡಿದಾಗ ಅವರು ಚೆನ್ನಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ ಬೆಳಿಗ್ಗೆ ಅವರನ್ನು ಭೇಟಿ ಮಾಡಲು ಹೋಗುವಷ್ಟರಲ್ಲಿ ಅವರ ನಿಧನದ ಸುದ್ದಿ ತಿಳಿದು ಬಂತು. ಅಂತಹ ನಾಯಕರನ್ನು ಕಳೆದುಕೊಂಡದ್ದು ನನ್ನಿಗೂ, ನಮ್ಮ ಪಕ್ಷಕ್ಕೂ ದೊಡ್ಡ ನಷ್ಟವಾಗಿದೆ” ಎಂದು ಅವರು ಭಾವುಕರಾಗಿ ಹೇಳಿದರು.
ಮೇಟಿ ಅವರು ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುವ ನಾಯಕರು ಆಗಿದ್ದರು. ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದ್ದು, ಅವರ ಅಪೂರ್ಣ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಈಗ ಎಲ್ಲರ  ಮೇಲಿದೆ.
ಈ ಹಿನ್ನೆಲೆಯಲ್ಲಿ ಉಮೇಶ್ ಮೇಟಿ ಅವರನ್ನು ಒಮ್ಮತದಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಅವರು ತಂದೆಯವರ ಜೊತೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಮರ್ಪಕ ಅರಿವು ಹೊಂದಿದ್ದಾರೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಬಡಜನರಿಗೆ ನೇರ ಪ್ರಯೋಜನ ತಂದುಕೊಟ್ಟಿದ್ದು, ಈ ಯೋಜನೆಗಳನ್ನು ಮುಂದುವರಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. “ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಟೀಕಿಸುತ್ತಿದ್ದರೂ, ಅದರ ಲಾಭವನ್ನು ಅವರು ತಾವೇ ಪಡೆಯುತ್ತಿದ್ದಾರೆ”. 

ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಅವರು, ಉಚಿತ ಬಸ್ ಪ್ರಯಾಣ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಪರಿಣಾಮವಾಗಿ ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ ಎಂದು ಹೇಳಿದರು. ಪ್ರತಿ ತಿಂಗಳು ₹2000 ನೇರವಾಗಿ ಮನೆ ಯಜಮಾನಿಯರ ಖಾತೆಗೆ ಜಮೆಯಾಗುತ್ತಿರುವುದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಯಾಗಿದ್ದು, ಮಹಿಳೆಯರ ಆತ್ಮಗೌರವ ಹೆಚ್ಚಾಗಿದೆ.
ಈ ಚುನಾವಣೆ ಸಾಮಾನ್ಯ ಚುನಾವಣೆಯಲ್ಲ, ಜನಾಭಿಪ್ರಾಯದ ಪ್ರತಿಬಿಂಬವಾಗಿದೆ. ಉಮೇಶ್ ಮೇಟಿ ಅವರಿಗೆ ಭಾರೀ ಮತಾಂತರದೊಂದಿಗೆ ಗೆಲುವು ತಂದುಕೊಡಬೇಕು. ಕನಿಷ್ಠ 20 ರಿಂದ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುವ ಗುರಿ ಇಟ್ಟು ಕಾರ್ಯಕರ್ತರು ಶ್ರಮಿಸಬೇಕು.

ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮೇಟಿ ಅವರ ಕನಸು ಸಾಕಾರವಾಗುತ್ತದೆ ಎಂದು ಅಪ್ಪಾಜಿ ನಾಡಗೌಡ ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅಭ್ಯರ್ಥಿಯಾದ ಉಮೇಶ್  ಮೇಟಿ, ಬಸವಂತಪ್ಪ ಮೇಟಿ, ಬಲರಾಮ ಪವಾರ್, ಜಟ್ಟೆಪ್ಪ ಮಾದಾಪುರ, ಶಶಿಕಾಂತ್ ಪೂಜಾರ್, ಶ್ರೀಕರ್ ದೇಸಾಯಿ ಹಾಗೂ ಇತರ ಮುಖಂಡರು   ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ