ಇಳಕಲ್ಲ ತಾಲೂಕು ಜಂಗಮ ಸಮಾಜದ ವತಿಯಿಂದ ತಹಶೀಲ್ದಾರರಿಗೆ ಮನವಿ
ಇಳಕಲ್ಲ:- ಇಳಕಲ್ಲ ತಾಲೂಕಿನ ವೀರಮಾಹೇಶ್ವರ ಜಂಗಮ ಸಮಾಜದ ಬಾಂಧವರಿಂದನಗರದ ನಿರೀಕ್ಷಣ ಮಂದಿರದ ಮುಂಭಾಗದಲ್ಲಿರುವ ಆದಿ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಇಂದು ಮುಂಜಾನೆ ೧೧ ಕ್ಕೆ ಪ್ರಾರಂಭ ಜಂಗಮ ಸಮಾಜದವರ ನಡಿಗೆ ಬಸ್ ನಿಲ್ದಾಣ, ಮಾರ್ಗವಾಗಿ ಕಂಠಿ ವೃತ್ತದಲ್ಲಿ ಕಂಠಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯ ಬರ್ಬರ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಪ್ರಾಮಾಣಿಕವಾಗಿ ವಿಚಾರಣೆ ಮಾಡಿ ಯಾವುದೇ ಒತ್ತಡಕ್ಕೂ ಮಣೆಯದೆ ಕೆಲಸ ಮಾಡಿರುವ ಕರ್ನಾಟಕ ಸರ್ಕಾರ ಪೊಲೀಸ ಇಲಾಖೆ ಕಮಿಷನರ್ ಬಿ ದಯಾನಂದ,ಡಿಸಿಪಿ ಗೀರಿಶ್ ಎಸಿಪಿ ಚಂದನ,ಎಸ್ .ನ್ಯಾಯಾಂಗ ಇಲಾಖೆ ಪಿ.ಪಿ ಪ್ರಸನ್ನ ಕುಮಾರ,ಅವರಿಗೆ ಜಂಗಮ ಸಮಾಜದ ಭಾಂಧವರು ಪುಷ್ಪರುಷ್ಠಿ ಮಾಡುವ ಮೂಲಕ ಅಭಿನಂದನೆಯನ್ನು ತಿಳಿಸಿದರು.ಈ ಅಭಿನಂದನಾ ನಡಿಗೆ ಇಳಕಲ್ಲ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ, ಸಂಗಮೇಶ್ ಜಾವುರಮಠ ಮಾತನಾಡಿ ರೇಣುಕಾ ಸ್ವಾಮಿ ಬರ್ಬರ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಪ್ರಾಮಾಣಿಕವಾಗಿ ವಿಚಾರಣೆ ಮಾಡಿದ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಯನ್ನು ತಿಳಿಸಿದರು.ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಹತ್ತೆಯಾದ ರೇಣುಕಾ ಸ್ವಾಮಿಯ ಧರ್ಮಪತ್ನಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಸಮಾಜದ ಪರವಾಗಿ ಒತ್ತಾಯ ಮಾಡಿದರು. ಸಮಾಜದ ಹಿ...