ತ್ಯಾಗ ಬಲಿದಾನ ಸ್ಮರಿಸುವ, ಹಜ್ ಯಾತ್ರೆ ಕೈಗೊಳ್ಳುವ ಮಹತ್ವದ ಹಬ್ಬ ಬಕ್ರೀದ್

ನಿಡಗುಂದಿ:ನಗರದಲ್ಲಿ ಇಂದು ಬೆಳಿಗ್ಗೆ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ ಅನ್ನು ಅತೀ ಸಂಭ್ರಮದಿಂದ ಆಚರಿಸಲಾಯಿತು.ಯಿದುಲ್ ಹಜ್ ಹಾ ನಮಾಜ್ ಚಾಂದ್ ತಾರಾ ಮಸೀದಿಯಲ್ಲಿ ಮಾಡಲಾಯಿತು.ನಮಾಜ್ ನೆರವೇರಿಸಿದ ಮೌಲಾನಾ ರವರಿಗೆ ಧನ್ಯವಾದ ಸಲ್ಲಿಸಿದರು. ಜೀಲ್ ಹಜ್ ನಿಮಿತ್ಯವಾಗಿ ಕಾಲೇಜ ರೊಡನಿಂದ ಚಾಂದ್ ತಾರಾ ಮಸೀದ್ ವರೆಗೆ ತಖಬೀರ ಹೇಳುತ್ತಾ ಆಗಮಿಸಿದರು. ಜೀಲ್ ಹಜ್ ದ ನಮಾಜ್ ನೆರವೇರಿಸಿದರು.
       ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬ. ಈ ಹಬ್ಬದ ಶುಭ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಯಾತ್ರೆಯನ್ನು ನೆರವೇರಿಸುತ್ತಾರೆ.
     ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮುದ್ದೇಬಿಹಾಳ,ಎಂ,ಐ ಕಲಾಲ್, ಹಾಜಿ ಹಾಸನಸಾಬ್ ಮನಗೂಳಿ, ಅಮೀರ ರಮಜಾ ಅಕ್ಕಲಕೋಟ ಹಾಗೂ ಸಮಾಜದ ಅಪಾರ ಪ್ರಮಾಣದಲ್ಲಿ ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ