ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಯೋಗ ದಿನಾಚರಣೆ

ಹುನಗುಂದ :ಮೂಗನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಜಾನೆ 7.30ಕೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕೆ ಯೋಗ ಅವಶ್ಯಕವಾಗಿದ್ದು. ಮಕ್ಕಳಲ್ಲಿ ದೈಹಿಕ,ಸಾಮಾಜಿಕ, ಆರ್ಥಿಕ ಮತ್ತು ಭಾವನಾತ್ಮಕ ಸದೃಢತೆಯನ್ನು ತರುವುದಕ್ಕೆ ಯೋಗ ಅವಶ್ಯಕವಾಗಿದ್ದು.ಪ್ರತಿಯೊಬ್ಬರು ದಿನ ನಿತ್ಯ ಯೋಗ, ಪ್ರಾಣಾಯಾಮಗಳನ್ನು ತಪ್ಪದೆ ಮಾಡಬೇಕೆಂದು ಯೋಗ ಶಿಕ್ಷಕರಾದಂತ ಕಿರಣ್  ಮಕ್ಕಳಿಗೆ ಸಲಹೆ ನೀಡಿದರು. 
     ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಂ. ಜಿ.ಗೌಡರ್ ರವರು ಯೋಗ ಮಾಡಿ ರೋಗದಿಂದ ದೂರವಿರಿ ಒಳ್ಳೆಯ ಆರೋಗ್ಯದಿಂದ ಮಾತ್ರ ಸದೃಢವಾದ ದೇಶವನ್ನು ನಿರ್ಮಾಣ ಮಾಡಲು ಸಾಧ್ಯ ,ಎಂದು ಮಕ್ಕಳಿಗೆ ಸಲಹೆ ನೀಡಿದರು. 
       ಶಾಲೆ ಶಿಕ್ಷಕರಾದ ಶ್ರೀ ಈರೇಶ ಕಲಗುಡಿ ಶ್ರೀ ಶ್ರೇಯಾಂಶ ಕೋಲ್ಹಾರ ಶ್ರೀಮತಿ ಶ್ರೀದೇವಿ ಚಳಗೇರಿ ಶ್ರೀಮತಿ ಮಂಜುಳಾ ಕಲಗುಡಿ ಆಯುಷ್ಮಾನ್ ಇಲಾಖೆಯ ವೈದ್ಯಾಧಿಕಾರಿ ಶ್ರೀಮತಿ ಸುರೇಖಾ ಚೂರಿ ಮೇಡಮ್ ಮತ್ತು ಆಯುಷ್ಮಾನ್ ಇಲಾಖೆ ಸಿಬ್ಬಂದಿಯಾದ ಶ್ರೀ ರವಿ ಓಗಿ ಅವರು ಉಪಸ್ಥಿತರಿದ್ದರು.
 ಈ ಸಂದರ್ಭದಲ್ಲಿ ಶಾಲೆಯ ಮಕ್ಕಳೆಲ್ಲ ವಿವಿಧ ಯೋಗದ ಆಸನಗಳನ್ನು ಮತ್ತು ನೃತ್ಯದ ಸಂಯೋಜನೆಯಲ್ಲಿ ಯೋಗವನ್ನು ಮಾಡುವುದರ ಮೂಲಕ ಯೋಗ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ