ಮೇಟಿ ಅವರ ಅಭಿವೃದ್ಧಿ, ಮಾನವೀಯತೆ ನೆನಪಿಸಿಕೊಳ್ಳಿ – ಸಂಯುಕ್ತ ಪಾಟೀಲ್ ಮನವಿ

ಬಾಗಲಕೋಟೆ: ಕ್ಷೇತ್ರದ ಅಭಿವೃದ್ಧಿಗೆ ಮೇಟಿ ಅವರು ಮಾಡಿದ ಕೆಲಸಗಳನ್ನು ನಾವು ಎಲ್ಲರೂ ನೆನಪಿಸಿಕೊಳ್ಳಬೇಕು ಎಂದು ಸಂಯುಕ್ತ ಪಾಟೀಲ್ ಹೇಳಿದರು.

ತಾಲೂಕಿನ ಭಗವತಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ ಮೇಟಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಸುಧಾರಿಸಿದ್ದಾರೆ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯವಿದ್ದ ಕಡೆಗಳಲ್ಲಿ ಬದಲಾವಣೆಗಳನ್ನು ತಂದಿದ್ದಾರೆ.
ಮೇಟಿ ಅವರ ವೈಯಕ್ತಿಕ ಸ್ವಭಾವವೂ ವಿಶೇಷವಾಗಿದ್ದು, ಮೊದಲ ಬಾರಿ ಚುನಾವಣೆಯ ಸಂದರ್ಭದಲ್ಲಿ ಮನೆಗೆ ಕರೆದುಕೊಂಡು ಆತಿಥ್ಯ ನೀಡಿದ ಘಟನೆಗಳನ್ನು ನೆನಪಿಸಿಕೊಂಡರು. ಅವರ ಮನೆಗೆ ಬಂದ ಪ್ರತಿಯೊಬ್ಬರಿಗೂ ಊಟ, ಚಹಾ ವ್ಯವಸ್ಥೆ ಮಾಡಿ, ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುವ ಗುಣ ಅವರದ್ದು.ಯಾವ ವ್ಯಕ್ತಿಯೇ ಬಂದರೂ ‘ನಮ್ಮ ಊರವರು, ನಮ್ಮ ಜನ’ ಎಂಬ ಮನೋಭಾವದಿಂದ ನೋಡಿಕೊಳ್ಳುವ ನಾಯಕತ್ವ ಮೇಟಿ ಅಜ್ಜ ಅವರದ್ದಾಗಿದೆರು. ಇಂತಹ ಮಾನವೀಯತೆ ಎಲ್ಲ ಶಾಸಕರಲ್ಲಿಯೂ ಕಾಣುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಬಾಗಲಕೋಟೆ ಕ್ಷೇತ್ರದ ಜನರನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಅವರ ಪ್ರೀತಿ ಮತ್ತು ವಿಶ್ವಾಸವನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕಾಗಿ ಎಲ್ಲಾ ಕಾರ್ಯಕರ್ತರು ಮತ್ತು ಜನರು ಒಗ್ಗಟ್ಟಾಗಿ ಉಮೇಶ್ ಮೇಟಿವರಗೆ ಬೆಂಬಲ ನೀಡಬೇಕು ಎಂದು ಸಂಯುಕ್ತ ಪಾಟೀಲ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಯುಕ್ತ ಪಾಟೀಲ್, ಬಸವಂತಪ್ಪ ಮೇಟಿ, ಎಸ್ ಎನ್ ರಾಂಪುರ್, ಬಲರಾಮ ಪವಾರ್, ಪರಸುರಾಮ ಮಹಾರಾಜನವರ್, ಮಂಜುಳಾ ಕಮತಿಗಿ, ಸಿದ್ದು ಕುರಿ, ಕರಿಬಸಪ್ಪ ಹಳ್ಳೂರ್, ಶರಣಪ್ಪ ಗುಳೇದ, ಚಂದ್ರಕಾಂತ್ ಗುಳೇದ, ಹಾಗೂ ಶಿವಪುತ್ರಪ್ಪ ದೊಡ್ಡಮನಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ