“ಮೇಟಿ ಅವರ ಕನಸು ಮುಂದುವರಿಸಲು ಉಮೇಶ್ ಮೇಟಿ ಗೆ ಬೆಂಬಲ ನೀಡೋಣ”: ಮಲ್ಲು ದ್ಯಾವನ್ನವರ್

ಬಾಗಲಕೋಟೆ: ತಾಲೂಕಿನ ಆಲೂರು ತಾಂಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಲ್ಲು ದ್ಯಾವನ್ನವರ್ ಅವರು, ದಿವಂಗತ ಎಚ್‌.ವೈ.ಮೇಟಿ ಅವರ ಕನಸನ್ನು ಮುಂದುವರಿಸಲು ಉಮೇಶ್ ಮೇಟಿ ಅವರಿಗೆ ಬೆಂಬಲ ನೀಡಬೇಕು 
ಎಚ್‌.ವೈ . ಮೇಟಿ ಅವರು ಅಗಲಿದ ಬಳಿಕದ ಈ ಉಪಚುನಾವಣೆ ಅನಿವಾರ್ಯವಾಗಿ ಎದುರಾಗಿದ್ದು, ಅವರ ಅಗಲಿಕೆಯ ನೋವು ಇನ್ನೂ ಕುಟುಂಬದವರಿಗೂ, ಅಭಿಮಾನಿಗಳಿಗೂ ಕಡಿಮೆಯಾಗಿಲ್ಲ.
  ಮೇಟಿ ಅವರು ದೂರದೃಷ್ಟಿಯುಳ್ಳ ನಾಯಕರು ಆಗಿದ್ದು, ಉಮೇಶ್ ಮೇಟಿ ಅವರ ಮೇಲೆ ವಿಶೇಷವಾದ ವಿಶ್ವಾಸ ಹೊಂದಿದ್ದರು. ತಮ್ಮ ನಂತರ ರಾಜಕೀಯವಾಗಿ ಮುಂದುವರಿಯಬೇಕಾದವರು ಉಮೇಶ್ ಮೇಟಿ ಎಂಬ ನಂಬಿಕೆಯನ್ನು ಅವರು ಬಹಳ ಹಿಂದೆಯೇ ವ್ಯಕ್ತಪಡಿಸಿದ್ದರು 

 ಪಿ ಎಲ್ ಡಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿಯೂ “ಉಮೇಶ್ ಮುಂದುವರಿಯಬೇಕು” ಎಂದು ಮೇಟಿ ಅವರು ಹೇಳಿದ್ದನ್ನು ಉಲ್ಲೇಖಿಸಿದ ದ್ಯಾವನ್ನವರ್, ಅದು ಅವರ ದೂರದೃಷ್ಟಿಗೆ ಸಾಕ್ಷಿ ಅದೇ ವೇಳೆ ಉಮೇಶ್ ಮೇಟಿ ಅವರು ಹಿರಿಯರಿಗೆ ಗೌರವ ನೀಡಿ ತ್ಯಾಗದ ಮನೋಭಾವ ತೋರಿಸಿದ್ದರು.

ಇಂದು ಪಕ್ಷದ ಎಲ್ಲಾ ಹಿರಿಯರು ಒಗ್ಗಟ್ಟಾಗಿ ಉಮೇಶ್ ಮೇಟಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು, ಮೇಟಿ ಅವರ ಕನಸನ್ನು ಮುಂದುವರಿಸುವ ನಿರ್ಧಾರವಾಗಿದೆ.

ಮೇಟಿ ಅವರಿಗೆ ನೀಡಿದ ಪ್ರೀತಿ ಮತ್ತು ಬೆಂಬಲವನ್ನು ಅದೇ ರೀತಿಯಲ್ಲಿ ಉಮೇಶ್ ಮೇಟಿ ಅವರಿಗೆ ನೀಡಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅವರ ಕನಸು ಸಾಕಾರಗೊಳ್ಳುತ್ತದೆ ಎಂದು ಮಲ್ಲು ದ್ಯಾವನ್ನವರ ಅಭಿಪ್ರಾಯವನ್ನು ಹಂಚಿಕೊಂಡರು

 ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ ಬಲರಾಮ ಪಾವರ್, ಸಂತೋಷ್ ಲಮಾಣಿ, ರಮೇಶ್ ಕೇಶಪ್ಪ,,ಶಿವಾನಂದ ಅಫ್ಜಲಪುರ್, ಮುತ್ತಪ್ಪ ಉಗ್ಗಿ ಹಾಗೂ ಶಶಿಕಾಂತ ಪೂಜಾರ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ