ಬಿಲಕೇರೂರಿಗೆ ₹11.93 ಕೋಟಿ ಅನುದಾನ; ಬಿಲಕೇರೂರನಲ್ಲಿ ಬಿಜೆಪಿ ತೊರೆದು ಯುವಕರು ಕಾಂಗ್ರೆಸ್ ಸೇರ್ಪಡೆ


ಬಾಗಲಕೋಟೆ :ತಾಲೂಕಿನ ಬಿಲಕೇರೂರ ಗ್ರಾಮದಲ್ಲಿ ಮತಯಾಚನೆ ವೇಳೆ ಮಾತನಾಡಿದ ಉಮೇಶ್ ಮೇಟಿ, ಕಳೆದ ಮೂರು ವರ್ಷಗಳಲ್ಲಿ ಗ್ರಾಮ ಅಭಿವೃದ್ಧಿಗೆ ಒಟ್ಟು ₹11 ಕೋಟಿ 93 ಲಕ್ಷ ಅನುದಾನವನ್ನು ಮೇಟಿ ಸಾಹೇಬರು ಒದಗಿಸಿದ್ದಾರೆ.
ಗ್ರಾಮದ ಮೂಲಸೌಕರ್ಯ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಗ್ರಾಮ ದೇವತೆ ದ್ಯಾಮವ್ವ ದೇವಸ್ಥಾನಕ್ಕೆ ₹20 ಲಕ್ಷ, ಮಲ್ಲಮ್ಮ ದೇವಸ್ಥಾನಕ್ಕೆ ₹20 ಲಕ್ಷ, ಶಾದಿವಾಲ್ ಅಭಿವೃದ್ಧಿಗೆ ಎರಡು ಹಂತಗಳಲ್ಲಿ ₹85 ಲಕ್ಷ, ಸಂಗಾಪುರ ಕ್ವಾಟಿ ದಾರಿ ಮೂರಂ ರಸ್ತೆಗೆ ₹55 ಲಕ್ಷ,ಬಿಲಕೇರೂರಿನಿಂದ ಅಚನೂರವರೆಗೆ ಡಾಂಬರ್ ರಸ್ತೆಗೆ ₹3 ಕೋಟಿ 80 ಲಕ್ಷ ಅನುದಾನ ಮಂಕಣಿ ದಾರಿ ಕಾಮಗಾರಿಗೆ ₹35 ಲಕ್ಷ, ಬಿಲಕೇರೂರ ಕ್ರಾಸ್ ಬಸ್ ನಿಲ್ದಾಣ ನಿರ್ಮಾಣಕ್ಕೆ ₹16 ಲಕ್ಷ, ಸಾಮಾಜಿಕ ಕಲ್ಯಾಣ ಇಲಾಖೆಯ ಹಾಸ್ಟೆಲ್ ದುರಸ್ತಿಗೆ ₹5 ಲಕ್ಷ, ಗಿರಿಜನ ಯೋಜನೆಯಡಿ ರಸ್ತೆ ತಡೆಗೋಡಿಗೆ ₹10 ಲಕ್ಷ ಹಾಗೂ ಸೇದು ಬಾವಿ ಹತ್ತಿರ ಸಿಸ್ಟೆನ್ ನಿರ್ಮಾಣಕ್ಕೆ ₹1 ಲಕ್ಷ ಅನುದಾನ ನೀಡಲಾಗಿದೆ. ಸಾಮಾನ್ಯ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ಹಾಗೂ ಬೋಡನಾಯಕದಿನ್ನಿ ಮೋರಂ ರಸ್ತೆಗೆ ₹5 ಲಕ್ಷ ಸಹ ಮೀಸಲಾಗಿದೆ.ಈ ಹಿಂದೆ ಪಶು ಚಿಕಿತ್ಸೆಗಾಗಿ ಗ್ರಾಮಸ್ಥರು ತಿಮ್ಮಾಪುರಕ್ಕೆ ತೆರಳಬೇಕಾಗುತ್ತಿತ್ತು. ಆದರೆ ಮೇಟಿ ಸಾಹೇಬರು ಗ್ರಾಮದಲ್ಲೇ ಪಶು ಚಿಕಿತ್ಸಾಲಯವನ್ನು ಮಂಜೂರು ಮಾಡಿಸಿ ಆರೋಗ್ಯ ಸೇವೆಯನ್ನು ಸುಲಭಗೊಳಿಸಿದ್ದಾರೆ.
ಮೇಟಿ ಸಾಹೇಬರು ತಮ್ಮ ರಾಜಕೀಯ ಜೀವನವನ್ನು ಬಿಲಕೇರೂರ ಗ್ರಾಮ ಪಂಚಾಯ್ತಿಯಿಂದ ಪ್ರಾರಂಭಿಸಿದ್ದು, ಬಿಲಕೇರೂರ ಮತ್ತು ತಿಮ್ಮಾಪುರ ಒಂದೇ ಎಂಬ ಭಾವನೆಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಉಮೇಶ್ ಮೇಟಿ ಹೇಳಿದರು. ಅವರ ಅಗಲಿಕೆಯ ನಂತರ ಪಕ್ಷದ ನಾಯಕರು ಉಮೇಶ್ ಮೇಟಿ ಅವರಿಗೆ ಅವಕಾಶ ನೀಡಿದ್ದು, ಜನರು ಆಶೀರ್ವಾದ ನೀಡಬೇಕು ಎಂದು ಮನವಿ ಮಾಡಿದರು.

 ಗಜಾನನ ಯುವಕ ಮಂಡಳಿಯ ಸದಸ್ಯರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸೇರ್ಪಡೆಗೊಂಡವರಲ್ಲಿ ದವಳಸಾಬ ಹಲಬರ (ಮಾಜಿ PKPS ಅಧ್ಯಕ್ಷರು), ಅಮಿನಸಾಬ ಹಲಬರ, ಸಾಬಣ್ಣ ನದಪ್, ಪೀರಸಾಬ್ ನದಾಫ್, ಹುಸೇನಬಾಷಾ ಶಿರೂರ, ಸೈಯದ್ ಚೋಳಚಗುಡ್ಡ, ರಿಯಾಜ್ ಬಿಲಕೇರಿ, ರಾಜೇಸಾಬ ಸಂಗಮದ, ರಾಜೇಸಾಬ ಶಿರೂರ,ಮೈಬುಸಾಬ್ ಬೆನಕಟ್ಟಿ, ಅಮೀರಖಾನ ಶಿರೂರ, ಮೈಬುಸಾಬ್ ಶೇಖ, ಸಂಗಮೇಶ್ ಹಿರೇಮಠ, ಮಹಾದೇವ ಏಳಬಣಮಿ, ವಿಠಲ ಕುರಿ, ವಿಠಲ ವಾಲಿಕಾರ, ಪ್ರವೀಣ್ ನೆಲಗಿ ಹಾಗೂ ಮಲ್ಲಪ್ಪ ಹಡಪದ ಕೂಡ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ, ಎಸ್.ಎನ್. ರಾಂಪುರ, ಮುತ್ತಪ್ಪ ಉಗ್ಗಿ, ಶಶಿಕಾಂತ ಪೂಜಾರ್, ಮಲ್ಲು ದ್ಯಾವನವರ, ಮಂಜುಳಾ ಕಮತಗಿ, ಮಹಾದೇವಿ ಮೇಟಿ,   ನಿಂಗಣ್ಣ ಕೋಟಿ, ವಿನಾಯಕ ವಜ್ರಮಟ್ಟಿ,  ಬಸು ಕಟಗೇರಿ, ಶಿವಪ್ಪ ಕರಲಿಂಗಣ್ಣವರ್, ಅನ್ವರ್ ಹಳೂರ, ಶಿದಪ್ಪ ಕುರಿ, ಜಟ್ಟೆಪ್ಪ ಮಾದಾಪುರ ಹಾಗೂ ಶಿವಪ್ಪ ನುಗ್ಲಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ