ಅಭಿವೃದ್ಧಿ ಹಾದಿ ಮುಂದುವರಿಸಲು ಉಮೇಶ್ ಮೇಟಿ ಗೆಲುವು ಅಗತ್ಯ: ರಾಹುಲ್ ಜಾರಕಿಹೊಳಿ
ಬಾಗಲಕೋಟೆ: ತಾಲೂಕಿನ ಬೇವೂರ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಜಾರಕಿಹೊಳಿ ಎಚ್. ವೈ. ಮೇಟಿ ಅವರ ಅವಧಿಯಲ್ಲಿ ಈ ಭಾಗದಲ್ಲಿ ನಿರಂತರವಾಗಿ ಜನಸೇವಾ ಕಾರ್ಯಗಳು ನಡೆದಿದ್ದೆ.ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹಾಗೂ ಸಾರ್ವಜನಿಕರ ಸಂತೋಷವನ್ನು ಸಾಧಿಸುವುದು ಮೇಟಿ ಅಜ್ಜ ಅವರ ಪ್ರಮುಖ ಗುರಿಯಾಗಿತ್ತು.
ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಈ ಅಭಿವೃದ್ಧಿ ಹಾದಿಯನ್ನು ಮುಂದುವರಿಸಲು ಎಲ್ಲರೂ ಒಂದಾಗಿ ಉಮೇಶ್ ಮೇಟಿ ಅವರನ್ನು ಗೆಲ್ಲಿಸಬೇಕು.
ಮೇಟಿ ಅಜ್ಜ ಅವರು ಸಾರ್ವಜನಿಕರೊಂದಿಗೆ ಉತ್ತಮ ಸಂವಾದ ನಡೆಸಿ, ಜನರ ಅಗತ್ಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದಾರೆ. ತಂದೆಯವರಂತೆ ಉಮೇಶ್ ಮೇಟಿ ಕೂಡ ಉತ್ತಮ ಕಾರ್ಯಶೈಲಿಯಿಂದ ಸ್ಥಳೀಯ ಜನರ ವಿಶ್ವಾಸ ಗಳಿಸಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಸೇವೆ ಮುಂದುವರೆಯಲಿದೆ.
ಮೇಟಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅವುಗಳನ್ನು ಮುಂದುವರಿಸಲು ಜನರ ಬೆಂಬಲ ಅಗತ್ಯವಿದೆ .
2023ರಲ್ಲಿ ನೀಡಿದ ಗ್ಯಾರೆಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಈಡೇರಿಸಿದ್ದು, ಜಾತಿ ಭೇದವಿಲ್ಲದೆ ಎಲ್ಲ ವರ್ಗದ ಜನರಿಗೆ ಸಮಾನವಾಗಿ ಯೋಜನೆಗಳ ಪ್ರಯೋಜನ ನೀಡಲಾಗಿದೆ.
ಇನ್ನೂ ಎರಡು ವರ್ಷಗಳ ಕಾಲ ಇದೇ ಸರ್ಕಾರ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲೂ ಸರ್ಕಾರದ ಬೆಂಬಲದಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ನಿಮ್ಮ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಆಗಬೇಕಾದರೆ ಉಮೇಶ್ ಮೇಟಿ ಅವರನ್ನು ಗೆಲ್ಲಿಸಬೇಕು ಎಂದು ರಾಹುಲ್ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಅಜಯ್ ಕುಮಾರ್ ಸರನಾಯಕ್, ಶ್ರೀಶೈಲ ದಳವಾಯಿ, ಸಂಯುಕ್ತ ಪಾಟೀಲ್, ಬಸವಂತಪ್ಪ ಮೇಟಿ, ಎಸ್ ಎನ್ ರಾಂಪುರ್, ಮಾಗನೂರು ವಕೀಲ್ ಬಲರಾಮ ಪವಾರ್, ಪರಸುರಾಮ ಮಹಾರಾಜನವರ್, ಮಂಜುಳಾ ಕಮತಿಗಿ, ರಮೇಶ ಕೊಳ್ಳಾರ್ , ಶರಣಪ್ಪ ಮಾಗನೂರ, ಹಾಗೂ ಸಿದ್ದು ಕುರಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ