ಜನಸಂಖ್ಯಾ ಸ್ಪೋಟವು ಮಾರಕವಾಗದೆ ಪೂರಕವಾಗಲಿ : ಡಾ.ರಾಜೇಶ್ವರಿ ತೆಗ್ಗಿ


ಬಾಗಲಕೋಟ: ಭಾರತವು ಜನಸಂಖ್ಯೆಯಲ್ಲಿ ಜಗತ್ತಿನಲ್ಲೆ ಮೊದಲನೆಯ ಸ್ಥಾನವನ್ನು ಹೊಂದಿದೆ, ಇದರಿಂದ ನಮ್ಮ ಮಾನವ ಸಂಪನ್ಮೂಲ ಮಾರಕವಾಗದೆ, ಇಡಿ ಜಗತ್ತಿಗೆ ಪೂರಕವಾಗಲಿ ಎಂದು ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ರಾಜೇಶ್ವರಿ ತೆಗ್ಗಿ ಹೇಳಿದರು.
      ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಎಲ್ಲ ಸಂಪನ್ಮೂಲ ಹೇರಳವಾಗಿದೆ, ಅದರಲ್ಲೂ ಮಾನವ ಸಂಪನ್ಮೂಲ ಇನ್ನು ಹೆಚ್ಚು ಇದೆ, ಜಗತ್ತಿನ ಪ್ರಮುಖ ಸಂಸ್ಥೆಯ ಮುಖ್ಯಸ್ಥರು ನಮ್ಮ ಭಾರತದವರೆ ಆಗಿದ್ದಾರೆ, ಇಡೀ ಜಗತ್ತಿಗೆ ನಮ್ಮ ದೇಶದ ತಂತ್ರಜ್ಞಾನ ನಾವು ಪೂರೈಸುತ್ತೀದ್ದೆವೆ. ಅದರ ಜೊತೆ ವಿದ್ಯಾರ್ಥಿಗಳು ವಿವಿಧ ಕೌಶಲಯತ ಆದಾಗ ಮಾತ್ರ ಜನಸಂಖ್ಯೆಯು ಮಾರಕವಾಗದೆ ಪೂರಕಾವಾಗುತ್ತೆದೆ ಎಂದು ಹೇಳಿದರು.
          ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ಶಾಹಿನ ನದಾಫ, ಆನಂದ್ ಗೋಳಸಂಗಿ, ಹಾಗೂ ಸಚಿನ್ ಕುಮಾರ್ ಲಮಾಣಿ ಅವರು ವಿಶ್ವ ಜನಸಂಖ್ಯಾ ಕುರಿತು ಮಾತನಾಡಿದರು. ಸಾವಿತ್ರಿ ಶಹಾಪೂರ ಹಾಗೂ ಸಂಗಡಿಗರು ಜನಸಂಖ್ಯಾ ಸ್ಪೋಟದ ಕುರಿತು ಹಾಡನ್ನು ಹಾಡಿದರು. ನಂತರ ಜನಸಂಖ್ಯಾ ಸ್ಪೋಟದ ಜಾಗೃತಿ ಮೂಡಿಸುವ ನಾಟಕವನ್ನು ಪ್ರಶಿಕ್ಷಣಾರ್ಥಿಗಳು ಪ್ರದರ್ಶಿಸಿದರು.  
ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಘಟಕ ಸಂಯೋಜಕರಾದ ಡಾ.ರಮೇಶ ಯಾನಮಶೆಟ್ಟಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಗೀತಾ ಮಟ್ಟಿಕಲ್ಲಿ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಯಾದ ಅಶ್ವಿನಿ ರಮಣಿ ನಿರೂಪಿಸಿದರು. ಸವಿತಾ ಅವರು ಪ್ರಾರ್ಥಿಸಿದರು. ವಿಜಯ್ ಕುಮಾರ್ ಕೋಟಿ ಸ್ವಾಗತಿಸಿದರು. ಬಸಮ್ಮ ರಾಂಪುರ್ ಅವರು ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ