ಮೆಲ್ಬ್ರೋ ಶುಗರ್ಸ ಪ್ರಾವೇಟ್ ಲಿಮಿಟೆಡ್ ವತಿಯಿಂದ ಎಂಪಿಎಸ್ ಶಾಲೆಗೆ ಲ್ಯಾಪ್ಟಾಪ್ ವಿತರಣೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಬಾಗಲಕೋಟೆ: ತಾಲೂಕಿನ ಬೆನಕಟ್ಟಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿ ಶಾಲೆಗೆ ಉಚಿತವಾಗಿ ಕೊಡುಗೆ ನೀಡಿದ ಮೇಲ್ಬ್ರೋ ಶುಗರ್ಸ್ ಪ್ರಾವಟ್ ಲಿಮಿಟೆಡ್ ನ ಉಪಾಧ್ಯಕ್ಷರಾದ ಚಂದ್ರಶೇಖರ್ ಹುಬ್ಬಳ್ಳಿಯವರು ಶಾಲೆಗೆ ವಿದ್ಯಾರ್ಥಿಗಳಿಗೆ ನೂತನ ಪ್ರಾಜೆಕ್ಟ್ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡಿದರು. ವಿತರಣೆ ಮಾಡಿ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ಅನುಕೂಲಕರವಾಗಲಿ ಎಂದು ಮಾತನಾಡಿದರು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮಾಂತಗೌಡ ಪಾಟೀಲ್ ಅವರು ಮೇಲ್ಬ್ರೋ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ಉಪಾಧ್ಯಕ್ಷರಾದ ಚಂದ್ರಶೇಖರ್ ಅವರನ್ನು ಶಾಲಾವತಿಯಿಂದ ಸನ್ಮಾನಿಸಿ ಗೌರವಿಸಿದರು. ಶಿಕ್ಷಕ ಪಾಂಡುರಂಗ ಸಣ್ಣಪ್ಪನವರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಚಂದ್ರಶೇಖರ್ ಬಾಳಕನವರ, ಗಣ್ಯರಾದ ಅಶೋಕ ಮೇಳ್ಳಿ ಹನಮಂತ ಅಮಾತೆಪ್ಪನವರ, ಯಲ್ಲಪ್ಪ ಬೆನ್ನೂರ್, ಗ್ರಾಪಂ ಸದಸ್ಯ ವಿನೋದ ನಾಯಕ, ವಿಕೆಪಿಎಸ್‌ಸಿ ಸದಸ್ಯ ರಾಘು ಯಡಹಳ್ಳಿ, ಶಾಲಾ ಮುಖ್ಯ ಗುರುಗಳಾದ ಜಗನ್ನಾಥ ಎಂ ಪತ್ತಾರ, ಸಹ ಶಿಕ್ಷಕರಾದ ರವಿ ಕೆಂಚಣ್ಣವರ, ಡಾ!!ಪಿ ಡಿ ಸರ್ಕಾರ್ ಹಾಗೂ ಮೇಲ್ಬ್ರೋ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿಗಳಾದ ಪ್ರಶಾಂತ್ ಹಾಗೂ ಮಂಜು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
UDAYA LOKA is a Kannada digital news platform from Bagalkot, Karnataka. We publish latest news about Bagalkot district, Karnataka politics, development works, government schemes and local updates. Our aim is to provide fast and reliable news to the people. Follow UDAYA LOKA for latest Kannada news updates.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ