ಉಪಚುನಾವಣೆಯಲ್ಲಿ ಗದ್ದಲ: ಕಾಂಗ್ರೆಸ್ ನಾಯಕರ ಗುರು ಪಾಟೀಲ್, ರಮೇಶ್ ಜಮಖಂಡಿ ವಿರುದ್ಧ ದೂರು: ಕ್ರಮಕ್ಕೆ ಒತ್ತಾಯ
ಉಪಚುನಾವಣೆಯಲ್ಲಿ ಪಕ್ಷ ವಿರೋಧ ಚಟುವಟಿಕೆ: ಕ್ರಮಕ್ಕೆ ಕೆಪಿಸಿಸಿ ಮುಂದೆ ದೂರು
ಬಾಗಲಕೋಟೆ: ಇತ್ತೀಚಿನ ಉಪಚುನಾವಣೆಯಲ್ಲಿ ಕಮತಗಿ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆದಿದೆಯೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಗುರು ಪಾಟೀಲ್ ಹಾಗೂ ರಮೇಶ್ ಜಮಖಂಡಿ ವಿರುದ್ಧ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು ಜಿಲ್ಲೆ ಕಾಂಗ್ರೆಸ್ ಸಮಿತಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ, ಈ ಇಬ್ಬರು ನಾಯಕರು ಪಕ್ಷದ ಅಧಿಕೃತ ಅಭ್ಯರ್ಥಿಗೆ ವಿರೋಧವಾಗಿ ನಡೆದುಕೊಂಡಿದ್ದಾರೆ ಅಂತಾ ಆರೋಪ ಮಾಡಲಾಗಿದೆ. ಇದರಿಂದ ಪಕ್ಷದ ಶಿಸ್ತುಗೆ ಧಕ್ಕೆಯಾಗಿದೆ ಅಂತ ಸ್ಥಳೀಯ ನಾಯಕರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು, “ಈ ದೂರನ್ನು ಈಗಾಗಲೇ ಕೆಪಿಸಿಸಿ (KPCC)ಗೆ ಕಳುಹಿಸಿದ್ದೀವಿ. ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಇವತ್ತು ಅಥವಾ ನಾಳೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳ್ತೀವಿ. ಬೇಕಾದ್ರೆ ಅವರನ್ನು ಪಕ್ಷದಿಂದ ಹೊರಹಾಕೋ ಕ್ರಮವೂ ಕೈಗೊಳ್ಳ್ತೀವಿ” ಅಂತ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗರಾಜ ಷ ಹದ್ಲಿ, ರಾಜು ಮನ್ನಿಕೇರಿ, ಚಂದ್ರಶೇಖರ್ ರಾಠೋಡ್ ಹಾಗೂ ಅಕ್ಬರ್ ಮುಲ್ಲಾ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ