ಪೋಸ್ಟ್‌ಗಳು

ಮರೆಯಲಾರದ ನೆನಪು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನಗುತ್ತಲೇ ಹೃದಯ ಗೆದ್ದ ನವಾಬ್ — ಇಂದು ನೆನಪು ಮಾತ್ರ

ಇಮೇಜ್
ನಮ್ಮ ಜೀವನದಲ್ಲಿ ಕೆಲವರು ಕೇವಲ ಸ್ನೇಹಿತರಲ್ಲ… ಅವರು ನಮ್ಮ ದಿನಗಳ ಬೆಳಕು, ನಮ್ಮ ನಗುವಿನ ಕಾರಣ, ನಮ್ಮ ನೆನಪಿನ ನಿತ್ಯ ಅಸ್ತಿತ್ವವಾಗಿರುತ್ತಾರೆ. ಅಂಥವರಲ್ಲಿ ಒಬ್ಬನೇ ನಮ್ಮ ಪ್ರೀತಿಯ ಗೆಳೆಯ ನವಾಬ್. 2020ರಿಂದ ಇಲ್ಲಿಯವರೆಗೆ ನಮ್ಮ ಜೊತೆ ಇದ್ದ ನವಾಬ್, ಕೇವಲ ಸ್ನೇಹಿತನಲ್ಲ — ನಮ್ಮ ಬದುಕಿನ ಒಂದು ಭಾಗವಾಗಿದ್ದನು. ಎಲ್ಲರ ಜೊತೆ ನಗುನಗುತ, ಸದಾ ಹಾಸ್ಯ ಮಾಡುತ್ತ, ಎಲ್ಲರ ಮನ ಗೆದ್ದ ಆ ನಗುಮುಖದ ಗೆಳೆಯ ಇವತ್ತು ನಮ್ಮೊಂದಿಗೆ ಇಲ್ಲ ಎಂಬ ವಿಚಾರವೇ ನಂಬಲಾರದ ನೋವನ್ನು ಉಂಟುಮಾಡುತ್ತದೆ. ನಿನ್ನೆ ಅವನ ಸಾವಿನ ಸುದ್ದಿ ಕೇಳಿದ ಕ್ಷಣದಿಂದಲೇ ನಮ್ಮ ಹೃದಯದಲ್ಲಿ ಒಂದು ಖಾಲಿತನ ಮೂಡಿದೆ. ನಮ್ಮ 20 ಜನ ಸ್ನೇಹಿತರ ಬಳಗದಲ್ಲಿ ನವಾಬ್ ಇಲ್ಲ ಅನ್ನೋದನ್ನು ಒಪ್ಪಿಕೊಳ್ಳೋದು ತುಂಬಾ ಕಷ್ಟವಾಗಿದೆ. “ನವಾಬ್ ಇಲ್ಲ” ಅನ್ನೋ ಮಾತು ನಮ್ಮ ಮನಸ್ಸಿಗೆ ಇಳಿಯುತ್ತಿಲ್ಲ. ನಿನ್ನೆ ಎಲ್ಲಾ ಸ್ನೇಹಿತರು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದ ನಮ್ಮ ಆತ್ಮೀಯ ಗೆಳೆಯರು, ಗೆಳತಿಯರು ಎಲ್ಲರೂ ವಿಡಿಯೋ ಕಾಲ್ ಮಾಡಿ “ಅವನ ಮುಖ ಒಮ್ಮೆ ತೋರಿಸಿ” ಎಂದು ಕೇಳಿಕೊಂಡರು. ಆದರೆ ನಾವು ಅಲ್ಲಿಗೆ ತಲುಪುವಷ್ಟರಲ್ಲಿ ನಮ್ಮ ಗೆಳೆಯನ ಅಂತಿಮ ವಿಧಿವಿಧಾನಗಳು ಮುಗಿದಿದ್ದವು. ನಮಗೂ ಅವನ ಮುಖವನ್ನು ಕೊನೆಯ ಬಾರಿ ನೋಡುವ ಭಾಗ್ಯ ಸಿಗಲಿಲ್ಲ. ಆ ಕ್ಷಣ ನಮ್ಮ ಮನಸ್ಸಿಗೆ ಇನ್ನಷ್ಟು ನೋವು ತಂದಿತು. ನಮ್ಮ ಎಲ್ಲಾ ಸ್ನೇಹಿತರೂ ಕೂಡ ಆ ದುಃಖವನ...