ಪೋಸ್ಟ್‌ಗಳು

ಶ್ರೀ ವೀರಮಾಹೇಶ್ವರ ಪತ್ತಿನ ಸಹಕಾರಿ ಸಂಘ (ನಿ)ನೂತನ ಇಲಕಲ್ಲ ಶಾಖೆ ಉದ್ಘಾಟನೆ

ಇಮೇಜ್
ಶ್ರೀ ವೀರಮಾಹೇಶ್ವರ ಪತ್ತಿನ ಸಹಕಾರಿ ಸಂಘ (ನಿ)ನೂತನ  ಇಲಕಲ್ಲ ಶಾಖೆ ಉದ್ಘಾಟನೆ ಶ್ರೀ ವೀರಮಾಹೇಶ್ವರ ಪತ್ತಿನ ಸಹಕಾರಿ ಸಂಘ (ನಿ )ಹುನಗುಂದ ಶಾಖೆ ಇಲಕಲ್ಲ ಉದ್ಘಾಟನೆಯನ್ನು ಶ್ರೀಪೂಜ್ಯರು ಅಮರೇಶ್ವರ ದೇವರು ನೆರವೆರಿಸಿದ್ದರು.  ಕಾರ್ಯಕ್ರಮ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ಗುರುಬಸಯ್ಯ.ಬಿ. ಕಂಬಾಳಿಮಠ ಸುಮಾರು 10 ವರ್ಷದಿಂದ ಇಲ್ಲಿವರೆಗೂ ಅಂದಾಜು 4 ಕೋಟಿ ಲಾಭ ದೊಂದಿಗೆ ಮುನ್ನಡಿಯುತಿದೆ ಅಂತಾ ವಿವರವಾಗಿ ಹೇಳಿದ್ದರು. ಇಲಕಲ್ಲ ನಗರದ ಮಹಾಂತೇಶ ಟಾಕೀಸ್ ರಸ್ತೆಯ ಪವನ ವಾಣಿಜ್ಯ ಮಳಿಗೆಯಲ್ಲಿ ಪತ್ತಿನ ಸಂಘವನ್ನು ಗಚ್ಚಿನಮಠದ ಶ್ರೀ ಪೂಜ್ಯರು ಅಮರೇಶ್ವರ ದೇವರು ಉದ್ಘಾಟಿಸಿದ್ದರು.ಸಂಘದ ಅಧ್ಯಕ್ಷ ಗುರುಬಸಯ್ಯ.ಬಿ. ಕಂಬಾಳಿಮಠ ಅಧ್ಯಕ್ಷತೆ ವಹಿಸಿದ್ದರು.ಇಲಕಲ್ಲ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಆದಯ್ಯ ಅಮರಯ್ಯ ಬೆನಕನಾಳಮಠ ಚನ್ನಬಸಯ್ಯ.ಎಸ್. ಹಿರೋಳಿಮಠ, ಮಹಾಂತಯ್ಯ.ಪಿ.ಗಚಿನಮಠ, ಬಸಯ್ಯ.ಎಸ್.ಹಿರೇಮಠ,ರಾಜಶೇಖರಯ್ಯ.ಜಿ. ಕೂಡಲಗಿಮಠ, ಮಹಾಂತಯ್ಯ.ಎಸ್.ತಾವರಗೇರಿ, ಶ್ರೀಮತಿ ಗಿರಿಜಮ್ಮ.ಎಸ್.ಮಠ, ಶ್ರೀಮತಿದ್ರಾಕ್ಷಯಣಿ.ಎಸ್.ಕೆಂಭಾವಿಹಿರೇಮಠ, ಲಲಿತಾ ಹಿರೇಮಠ, ನಂದಾ.ಎಂ.ಬೇಲೆರಿ, ಹಾಗೂ ಎಲ್ಲಾ ನಿರ್ದೇಶಕರು ಹಾಗೂ ನಗರದ ಗಣ್ಯರು ಹಾಜರಿದ್ದರು.

ಇಳಕಲ್ ಸಾರಿಗೆ ಘಟಕದಲ್ಲಿ ಮಹಾಶಿವಚರಣೆ ಹೇಮರೆಡ್ಡಿ ಮಲ್ಲಮ್ಮನವರ 602ನೇ ಜಯಂತೋತ್ಸವ

ಇಮೇಜ್
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗದ ಇಳಕಲ್ ಸಾರಿಗೆ ಘಟಕದಲ್ಲಿ ಮಹಾಶಿವಚರಣೆ ಹೇಮರೆಡ್ಡಿ ಮಲ್ಲಮ್ಮನವರ 602ನೇ ಜಯಂತೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.  ಮಹಾಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಘಟಕದ ವ್ಯವಸ್ಥಾಪಕ ಜಿಎಸ್ ಬಿರಾದಾರ್ ಹಾಗೂ ವೇದಿಕೆಯ ಮೇಲಿರುವ ಗಣ್ಯರು ಉದ್ಘಾಟಿಸಿದರು.   ಜಯಂತೋತ್ಸವ ಸಮಾರಂಭದಲ್ಲಿ ಇಳಕಲ್ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲಾ ನೌಕರರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.  ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತೋತ್ಸವ ಕುರಿತು ನಿರ್ವಾಹಕಿ ಮಲ್ಲಮ್ಮ ಪಾಟೀಲ್ ಮಾತನಾಡಿ ತಾಯಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ಇಡೀ ಮಹಿಳಾ ಕುಲಕ್ಕೆ ಆದರ್ಶಪ್ರಾಯಳು, ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಂಡ ಮಹಾದೇವತೆ ಹೇಮರೆಡ್ಡಿ ಮಲ್ಲಮ್ಮನವರು, ಇಂತಹ ಮಹಾನ್ ಶಿವಶರಣೆಯ ಆದರ್ಶ ನಮಗೆಲ್ಲರಿಗೂ ಮಾದರಿ ಎಂದು ಬಣ್ಣಿಸಿದರು.  ನಂತರ ಘಟಕದ ವ್ಯವಸ್ಥಾಪಕ ಜಿ ಎಸ್ ಬಿರಾದರ್ ಮಾತನಾಡಿ ತನ್ನ ಭಕ್ತಿಯ ಮೂಲಕ ಭೂಮಂಡಲದ ಒಡೆಯ ಶ್ರೀಶೈಲ ಮಲ್ಲಿಕಾರ್ಜುನನ ಒಲಿಸಿಕೊಂಡ ಮಹಾನ್ ದೇವತೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರಾಗಿದ್ದಾರೆ. ದೇವರು ಪ್ರತ್ಯಕ್ಷರಾದಾಗ ಇಡೀ ಮನುಕುಲಕ್ಕೆ ಒಳಿತನ್ನು ಬಯಸಿ...

ಅನಧಿಕೃತ ಎರಡು ಶಾಲೆಗಳ ಮಾನ್ಯತೆ ರದ್ದು

ಇಮೇಜ್
ಇಳಕಲ್ : ಗಂಗೂರ ಶರಣು  ಮಹಾಂತೇಶ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಗರದಲ್ಲಿ ನಡೆಯುತ್ತಿದ್ದ ಎರಡು ಪ್ರಾಥಮಿಕ ಶಾಲೆಗಳ ಮಾನ್ಯತೆಯನ್ನು ಬಾಗಲಕೋಟ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ ಕೆ ನಂದನೂರ ರದ್ದುಗೊಳಿಸಿದ್ದಾರೆ.        ಈ ಸಂಸ್ಥೆ ನಡೆಸುತ್ತಿದ್ದ ಪ್ರೇರಣಾ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಬಸವಶ್ರೀ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯು ಇಲಾಖೆಗೆ ಯಾವುದೇ ಸೂಚನೆ ನೀಡದೇ ಸ್ಥಳಾಂತರ ಮಾಡಿದ್ದಾರೆ ಎಂದು ಉದಯಕುಮಾರ ವದ್ದಿ ಯವರು ಆರೋಪಿಸಿದ್ದರು, ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ವರದಿ ಒಪ್ಪಿಸಿದರು, ವರದಿ ಆಧರಿಸಿ ಈ ಎರಡೂ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಯಿತು. ಈ ಎರಡು ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಲ್ಲಿ ಪ್ರವೇಶ ಮಾಡಿಸಬೇಕು ಎಂದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವರು ಸಲಹೆ ನೀಡಿದ್ದಾರೆ.

ಬಲಕುಂದಿ ತಾಂಡಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಇಮೇಜ್
ಹೊಸದಾಗಿ ಒಂದನೇ ತರಗತಿಗೆ ಶಾಲೆಗೆ ದಾಖಲಾದ ಮಕ್ಕಳಿಂದ ಸಸಿಗೆ ನೀರು ಉಣಿಸುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯಲ್ಲಿ ಆಚರಿಸಲಾಯಿತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮೂಲಕ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಪಿ ಎಸ್ ಪಮ್ಮಾರ ,ಪ್ರತಿ ಮಕ್ಕಳು ಒಂದೊಂದು ಸಸಿ ಮನೆಯ ಮುಂದೆ ಹಾಗೂ ಶಾಲೆಯಲ್ಲಿ ನೆಡುವುದರ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಲು ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರಾದ ಶ್ರೀಮತಿ ಜಿ ಕೆ ಮಠ,ಶ್ರೀ ಎ ಡಿ ಬಾಗವಾನ ,ಶ್ರೀಮತಿ ಪಿ ಎಸ್ ಹೊಸುರು ,ಶ್ರೀಮತಿ ಆರ್ ಎಸ್ ಕೊಡಗಲಿ ,ಶ್ರೀಮತಿ ಎಂ ಎನ್ ಅರಳಿಕಟ್ಟಿ ,ಶ್ರೀಮತಿ ಎಂ ಪಿ ಚೇಗೂರ ,ಶ್ರೀಮತಿ ಎಸ್ ಎಲ್ ಜೋಗಿನ ,ಶ್ರೀ ಎಂ ಎಸ್ ಬೀಳಗಿ ,ಶ್ರೀಮತಿ ಎಸ್ ಎಂ ಮಲಗಿಹಾಳ ,ಶ್ರೀ ಪಿ ಟಿ ಮೇಗಡಿ ಹಾಗೂ ಶ್ರೀಮತಿ ಸಾಯಿರಾ ಹೆರಕಲ್ ಉಪಸ್ಥಿತರಿದ್ದರು.

ಪರಿಸರ ರಕ್ಷಣೆ ನಮ್ಮೆಲ್ಲರ ಜವಬ್ದಾರಿ-ಬಿ.ಎಂ. ಕಬ್ಬಿಣದ

ಇಮೇಜ್
        ಇಳಕಲ್- ಸ್ಥಳಿಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ, ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡವ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ಅತಿಥಿಗಳಾಗಿ ಮಹಿಳಾ ವಿಶ್ವವಿದ್ಯಾಲಯ  ದ ಡಾ. ಪಿ.ಕಣ್ಣನ್. ಡಾ. ಗವಿಸಿದ್ದಪ್ಪ. ಆನಂದಹಳ್ಳಿ ಹಾಗೂ ಡಾ. ಶ್ರೀನಿವಾಸ ಆಗಮಿಸಿದ್ದರು. ವಿದ್ಯಾರ್ಥಿಗಳು ತಮ್ಮ ಜನ್ಮದಿನಾಚರಣೆ ಹಾಗೂ ಮಹಾನ್ ವ್ಯಕ್ತಿಗಳ ಜಯಂತಿ ಅಂಗವಾಗಿ ತಮ್ಮ ಮನೆಯ ಸುತ್ತಮುತ್ತ ಸಸಿಗಳನ್ನು ನೆಡಬೇಕು ಅದರಿಂದ ಪರಿಸರ ರಕ್ಷಣೆ ಆಗುತ್ತದೆ ಪರಸರವಿದ್ದರೆ ಮಾತ್ರ ಜೀವರಾಶಿಗೆ ಇಲ್ಲಿ ಸ್ಥಾನ ಅದಕ್ಕಾಗಿ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕಾಲೇಜು ಚೇರಮನ್ನರಾದ ಶ್ರೀ ಬಿ.ಎಂ. ಕಬ್ಬಿಣದ ಹೇಳಿದರು. ಅತಿಥಿಗಳು ಸಸಿನಡುವ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ತಿಳಿಸಿದರು ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯರಾದ ಶ್ರೀ ಬಸವರಾಜ. ಸುಗ್ಗಮದ. ಎನ್.ಎಸ್.ಎಸ್. ಅಧಿಕಾರಿಗಳಾದ ಎಮ್.ಎನ್.ಗೌಡರ. ಶ್ರೀಮತಿ.ಕೆ.ಡಿ. ಬಿರಾದರ ಸ್ಕೌಟ್ & ಗೈಡ್ಸ ಅಧಿಕಾರಿಗಳಾದ ಎಸ್.ಆರ್.ಕಲ್ಯಾಣಶೆಟ್ಟಿ. ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಬಾಗಲಕೋಟಯಲ್ಲಿ ನಕಲಿ ಐಬಿ ವೇಷ ಯುವಕ ಪೊಲೀಸರ ಬಲೆಗೆ

ಇಮೇಜ್
ಬಾಗಲಕೋಟ: ನನಗೆ ಎಲ್ಲರೂ ಮರ್ಯಾದೆ ಕೊಡಬೇಕು ಮತ್ತು ಮನೆಯಲ್ಲಿ ನಾನು ಸರ್ಕಾರಿ ಉನ್ನತ ಅಧಿಕಾರಿಯೆಂಬ ಸಂದೇಶ ನೀಡಲು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಯಾಗಿದ್ದೇನೆಂದು ನಕಲಿ ಐಡಿ ಕಾರ್ಡ್ ಮಾಡಿಕೊಂಡು ಊರು ಸುತ್ತುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ತಾಲೂಕಿನ ನಾವಲಗಿ ಗ್ರಾಮದ ಸಂಗಮೇಶ ಲಕ್ಕಪ್ಪಗೋಳ(22) ಮೂಲತಃ ಹಿಪ್ಪರಗಿ ಗ್ರಾಮದವನಾಗಿದ್ದು, ಐಬಿ ನಕಲಿ ಕಾರ್ಡ್, ಕ್ಯಾಪ್ ಹೊಂದಿದ್ದ ಆರೋಪಿಯು ಬೈಕ್ ಮೇಲೂ ಐಬಿ ಲೇಗೋ ಹಾಕಿಕೊಂಡುಸುತ್ತುತ್ತಿದ್ದ. ನಕಲಿ ಗನ್(ಲೈಟರ್ ಹತ್ತುವ ವಸ್ತು), ಕೆಟ್ಟ ವಾಕಿಟಾಕಿಯೊಂದಿಗೂ ಫೋಸ್ ನೀಡಿದ್ದ. ಈ ವಿಚಾರ ಮೇಲಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಈತನಿಗಾಗಿ ಜಾಲ ಬೀಸುವಾಗಲೇ ಬನಹಟ್ಟಿಯ ಬಿದರಿ ಸಮುದಾಯ ಭವನ ಹತ್ತಿರದ ಚೆಕ್‌ಪೋಸ್ಟಲ್ಲಿ ಪೊಲೀಸರಿಗೆ ಈ ಐಡಿ ಕಾರ್ಡ್‌ ತೋರಿಸಿದ್ದಾನೆ. ತಕ್ಷಣವೇ ಸಂಶಯಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಿಕ್ಕಿ ಬಿದ್ದಿದ್ದಾನೆ.      ಊರಲ್ಲಿ ಗೌರವ ಸಿಗಲಿ ಹಾಗು ಮನೆಯಲ್ಲಿ ಪದೇ ಪದೇ ಯಾವದಾದರೂ ನೌಕರಿಗೆ ಸೇರೆಂದು ಒತ್ತಾಯಕ್ಕೆ ಈ ವೇಷ ಹಾಕಿದ್ದೇನೆಂದು ಆರೋಪಿ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ. ಪ್ರಾಥಮಿಕ ವರದಿ ಪ್ರಕಾರ ಈತನ ಹಿನ್ನಲೆ ಯಾವದೇ ಪ್ರಕರಣವಿಲ್ಲ. ಯಾರಿಗಾದರೂ ವಂಚನೆ ಅಥವಾ ಮೋಸಗೊಳಿಸಿದ ಮಾಹಿತಿಯಿಲ್ಲವೆಂಬುದು ತಿಳಿದು ಬಂದಿದೆ. ಬನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ...

ನಂದವಾಡಗಿ ಶಾಲೆಯಲ್ಲಿ ಸಂಭ್ರಮ ಶಾಲಾ ಪ್ರಾರಂಭೋತ್ಸವ

ಇಮೇಜ್
ನಂದವಾಡಗಿ ೩೧: ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ 2೦24-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಯಿತು. ಅಕ್ಷರ ಬಂಡಿ, ಅಕ್ಷರಾ ಬಂದಳು, ಅಕ್ಷರ ಶಾಲೆಗೆ, ಅಕ್ಷರ ಕುಂಭದ ಮೂಲಕ ನಾವಿನ್ಯತೆಯೊಂದಿಗೆ ಶಾಲಾ ಪ್ರಾರಂಭೋತ್ಸವ ಜರುಗಿತು. ಮಕ್ಕಳು ಉತ್ಸಾಹ, ಸಂತಸದಿಂದ ಶಾಲೆಗೆ ಆಗಮಿಸಿದರು. ಶಾಲಾ ಮುಖ್ಯ ಗುರುಮಾತೆ, ಶಿಕ್ಷಕ ವೃಂದ ಹೂ ಗುಚ್ಛ ಹಾಗೂ ಸಿಹಿ ಹಂಚಿ ಸ್ವಾಗತಿಸಿದರು.       ಊರಿನಲ್ಲಿ ಪ್ರಭಾತ ಪೇರಿ, ಕರಪತ್ರ ಹಂಚುವ ಮೂಲಕ ದಾಖಲಾತಿ ಅಂದೋಲನ ಯಶಸ್ವಿಯಾಗಿ ನೇರವೇರಿತು. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಒಂದನೇ ವರ್ಗಕ್ಕೆ ದಾಖಲು ಮಾಡಿಸಿದರು.    ಈ ಒಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಬಿ ಆಯ್ ಆರ್ ಟಿ ಶ್ರೀ ಸುರೇಶ ವಾಯ್ ಸೂಳೆಭಾವಿ ಸರ್ ಹಾಗೂ ನಂದವಾಡಗಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಡಿ ಜಿ ಸಜ್ಜನ ಸರ್ ಚಾಲನೆ ನೀಡಿದರು.ಶೈಕ್ಷಣಿಕ ಬಲವರ್ಧನೆ ವರ್ಷಕ್ಕೆ ವಿದ್ಯಾರ್ಥಿನಿಯರು ಸಂತಸದಿಂದ ಪಾಲ್ಗೊಂಡರು.ದಾಖಲಾತಿ ಆಂದೋಲನದಲ್ಲಿ ಸ ಹೆ ಮ ಹಿ ಪ್ರಾ ಶಾಲೆಗೆ ೨೧ ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದಿದ್ದಾರೆ.    ಕಾರ್ಯಕ್ರಮದಲ್ಲಿ ಸ ಹೆ ಮ ಹಿ ಪ್ರಾ ಶಾಲೆ ನಂದವಾಡಗಿ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಬಸವರಾಜ ಬಲಕುಂದಿ, ಡಾ.ವಿಶ್ವನಾಥ ತೋಟ...