ಬಾಗಲಕೋಟಯಲ್ಲಿ ನಕಲಿ ಐಬಿ ವೇಷ ಯುವಕ ಪೊಲೀಸರ ಬಲೆಗೆ


ಬಾಗಲಕೋಟ: ನನಗೆ ಎಲ್ಲರೂ ಮರ್ಯಾದೆ
ಕೊಡಬೇಕು ಮತ್ತು ಮನೆಯಲ್ಲಿ ನಾನು ಸರ್ಕಾರಿ ಉನ್ನತ ಅಧಿಕಾರಿಯೆಂಬ ಸಂದೇಶ ನೀಡಲು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಯಾಗಿದ್ದೇನೆಂದು ನಕಲಿ ಐಡಿ ಕಾರ್ಡ್
ಮಾಡಿಕೊಂಡು ಊರು ಸುತ್ತುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.


ತಾಲೂಕಿನ ನಾವಲಗಿ ಗ್ರಾಮದ ಸಂಗಮೇಶ
ಲಕ್ಕಪ್ಪಗೋಳ(22) ಮೂಲತಃ ಹಿಪ್ಪರಗಿ ಗ್ರಾಮದವನಾಗಿದ್ದು, ಐಬಿ ನಕಲಿ ಕಾರ್ಡ್, ಕ್ಯಾಪ್ ಹೊಂದಿದ್ದ ಆರೋಪಿಯು ಬೈಕ್ ಮೇಲೂ ಐಬಿ ಲೇಗೋ ಹಾಕಿಕೊಂಡುಸುತ್ತುತ್ತಿದ್ದ. ನಕಲಿ ಗನ್(ಲೈಟರ್ ಹತ್ತುವ ವಸ್ತು), ಕೆಟ್ಟ
ವಾಕಿಟಾಕಿಯೊಂದಿಗೂ ಫೋಸ್ ನೀಡಿದ್ದ. ಈ ವಿಚಾರ ಮೇಲಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಈತನಿಗಾಗಿ ಜಾಲ ಬೀಸುವಾಗಲೇ ಬನಹಟ್ಟಿಯ ಬಿದರಿ ಸಮುದಾಯ ಭವನ ಹತ್ತಿರದ ಚೆಕ್‌ಪೋಸ್ಟಲ್ಲಿ ಪೊಲೀಸರಿಗೆ ಈ ಐಡಿ ಕಾರ್ಡ್‌ ತೋರಿಸಿದ್ದಾನೆ. ತಕ್ಷಣವೇ ಸಂಶಯಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಿಕ್ಕಿ ಬಿದ್ದಿದ್ದಾನೆ.

     ಊರಲ್ಲಿ ಗೌರವ ಸಿಗಲಿ ಹಾಗು ಮನೆಯಲ್ಲಿ ಪದೇ ಪದೇ ಯಾವದಾದರೂ ನೌಕರಿಗೆ ಸೇರೆಂದು ಒತ್ತಾಯಕ್ಕೆ ಈ ವೇಷ ಹಾಕಿದ್ದೇನೆಂದು ಆರೋಪಿ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ. ಪ್ರಾಥಮಿಕ ವರದಿ ಪ್ರಕಾರ ಈತನ ಹಿನ್ನಲೆ ಯಾವದೇ ಪ್ರಕರಣವಿಲ್ಲ. ಯಾರಿಗಾದರೂ ವಂಚನೆ ಅಥವಾ ಮೋಸಗೊಳಿಸಿದ ಮಾಹಿತಿಯಿಲ್ಲವೆಂಬುದು ತಿಳಿದು ಬಂದಿದೆ. ಬನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ಮುಂದುವರೆಸಿದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ