ಶ್ರೀ ವೀರಮಾಹೇಶ್ವರ ಪತ್ತಿನ ಸಹಕಾರಿ ಸಂಘ (ನಿ)ನೂತನ ಇಲಕಲ್ಲ ಶಾಖೆ ಉದ್ಘಾಟನೆ
ಶ್ರೀ ವೀರಮಾಹೇಶ್ವರ ಪತ್ತಿನ ಸಹಕಾರಿ ಸಂಘ (ನಿ)ನೂತನ ಇಲಕಲ್ಲ ಶಾಖೆ ಉದ್ಘಾಟನೆ ಶ್ರೀ ವೀರಮಾಹೇಶ್ವರ ಪತ್ತಿನ ಸಹಕಾರಿ ಸಂಘ (ನಿ )ಹುನಗುಂದ ಶಾಖೆ ಇಲಕಲ್ಲ ಉದ್ಘಾಟನೆಯನ್ನು ಶ್ರೀಪೂಜ್ಯರು ಅಮರೇಶ್ವರ ದೇವರು ನೆರವೆರಿಸಿದ್ದರು. ಕಾರ್ಯಕ್ರಮ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ಗುರುಬಸಯ್ಯ.ಬಿ. ಕಂಬಾಳಿಮಠ ಸುಮಾರು 10 ವರ್ಷದಿಂದ ಇಲ್ಲಿವರೆಗೂ ಅಂದಾಜು 4 ಕೋಟಿ ಲಾಭ ದೊಂದಿಗೆ ಮುನ್ನಡಿಯುತಿದೆ ಅಂತಾ ವಿವರವಾಗಿ ಹೇಳಿದ್ದರು. ಇಲಕಲ್ಲ ನಗರದ ಮಹಾಂತೇಶ ಟಾಕೀಸ್ ರಸ್ತೆಯ ಪವನ ವಾಣಿಜ್ಯ ಮಳಿಗೆಯಲ್ಲಿ ಪತ್ತಿನ ಸಂಘವನ್ನು ಗಚ್ಚಿನಮಠದ ಶ್ರೀ ಪೂಜ್ಯರು ಅಮರೇಶ್ವರ ದೇವರು ಉದ್ಘಾಟಿಸಿದ್ದರು.ಸಂಘದ ಅಧ್ಯಕ್ಷ ಗುರುಬಸಯ್ಯ.ಬಿ. ಕಂಬಾಳಿಮಠ ಅಧ್ಯಕ್ಷತೆ ವಹಿಸಿದ್ದರು.ಇಲಕಲ್ಲ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಆದಯ್ಯ ಅಮರಯ್ಯ ಬೆನಕನಾಳಮಠ ಚನ್ನಬಸಯ್ಯ.ಎಸ್. ಹಿರೋಳಿಮಠ, ಮಹಾಂತಯ್ಯ.ಪಿ.ಗಚಿನಮಠ, ಬಸಯ್ಯ.ಎಸ್.ಹಿರೇಮಠ,ರಾಜಶೇಖರಯ್ಯ.ಜಿ. ಕೂಡಲಗಿಮಠ, ಮಹಾಂತಯ್ಯ.ಎಸ್.ತಾವರಗೇರಿ, ಶ್ರೀಮತಿ ಗಿರಿಜಮ್ಮ.ಎಸ್.ಮಠ, ಶ್ರೀಮತಿದ್ರಾಕ್ಷಯಣಿ.ಎಸ್.ಕೆಂಭಾವಿಹಿರೇಮಠ, ಲಲಿತಾ ಹಿರೇಮಠ, ನಂದಾ.ಎಂ.ಬೇಲೆರಿ, ಹಾಗೂ ಎಲ್ಲಾ ನಿರ್ದೇಶಕರು ಹಾಗೂ ನಗರದ ಗಣ್ಯರು ಹಾಜರಿದ್ದರು.