ವಿಧಾನ ಪರಿಷತ್ಗೆ ಚುನಾವಣೆಗೆ 64 ಆಕಾಂಕ್ಷಿಗಳ ಶಾರ್ಟ್ಲಿಸ್ಟ್ ನಲ್ಲಿ : ವೀಣಾ ಕಾಶಪ್ಪನವರ್ ಹೆಸರು
ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದ ಡಿಕೆಶಿ, ದೆಹಲಿಗೆ ಹೋಗಿ ಪಟ್ಟಿ ನೀಡಿ ಬಂದಿದ್ದೇವೆ. 11 ಸ್ಥಾನಕ್ಕೆ 300 ಆಕಾಂಕ್ಷಿಗಳು ಇದ್ದರು. ನಾವು 65 ಮಂದಿಯ ಶಾರ್ಟ್ಲಿಸ್ಟ್ ಕೊಟ್ಟು ಬಂದಿದ್ದೇವೆ. ನಮ್ಮ ಅಭಿಪ್ರಾಯವನ್ನು ಹೇಳಿದ್ದೇವೆ. ಯತೀಂದ್ರ ಅವರದ್ದು ಮೊದಲೇ ಕಮಿಟ್ ಮೆಂಟ್ ಇದೆ. ಹಾಗಾಗಿ ಅವರಿಗೆ ಟಿಕೆಟ್ ನೀಡುವುದಕ್ಕೆ ಹೈಕಮಾಂಡ್ ಕೂಡ ಸಮ್ಮತಿ ನೀಡಿದೆ. ಇವರ ಜೊತೆಗೆ ವಿಧಾನಸಭಾ
ಅಕಾಂಕ್ಷಿಗಳಲ್ಲಿ ಹೈದ್ರಾಬಾದ್ ಕರ್ನಾಟಕ , ಮುಂಬಯಿ ಕರ್ನಾಟಕ, ಬಯಲು ಸೀಮೆ ಎಲ್ಲಾ ಭಾಗದವರಿದ್ದಾರೆ. 21 ಮಂದಿ ಕರಾವಳಿ ಭಾಗದಲ್ಲಿ, 11 ಮಂದಿ ಮೈಸೂರು ಭಾಗದಲ್ಲಿ ಆಕಾಂಕ್ಷಿಗಳು ಇದ್ದಾರೆ ಎಂದು ಡಿಸಿಎಂ ತಿಳಿಸಿದ್ದಾರೆ. ಪರಿಷತ್ ಚುನಾವಣೆಯಲ್ಲಿ 11 ಕ್ಷೇತ್ರಗಳ ಪೈಕಿ ವಿಧಾನಸಭೆಯಲ್ಲಿನ ಸಂಖ್ಯಾಬಲ ಆಧಾರದಲ್ಲಿ ಪಕ್ಷಕ್ಕೆ ಗೆಲ್ಲುವ ಅವಕಾಶವಿರುವ 7 ಅಭ್ಯರ್ಥಿಗಳನ್ನು ಫೈನಲ್ ಮಾಡಲು ಕಸರತ್ತು ನಡೆದಿದೆ. ಜೂನ್ 13 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಕನಿಷ್ಠ ಏಳು ಎಂಎಲ್‌ಸಿ ಸ್ಥಾನಗಳನ್ನು ಗೆಲ್ಲಬಹುದು.
ಶಾರ್ಟ್ಲಿಸ್ಟ್ನಲ್ಲಿರುವ ಪ್ರಮುಖರು
ಶಾರ್ಟ್ಲಿಸ್ಟ್ನಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ, ಎನ್.ಎಸ್.ಬೋಸರಾಜು, ರಮೇಶ್ ಬಾಬು, ಕೆ.ಪಿ.ನಂಜುಂಡಿ, ಬಿ.ವಿ.ಶ್ರೀನಿವಾಸ್, ಎಂ.ವೆಂಕಟೇಶ್, ಕೆ.ಗೋವಿಂದರಾಜು, ವಿನಯ್ ಕಾರ್ತಿಕ್, ಎ.ಎನ್.ನಟರಾಜ್ ಗೌಡ, ನಂಜಯ್ಯಮುತ್ತು, ವೀಣಾ ಕಾಶಪ್ಪನವರ್, ವಸಂತಕುಮಾರ್, ಬಸವರಾಜು, ಪುಷ್ಪಾ ಅಮರನಾಥ್, ಮುದ್ದುರಂಗ, ಮುದ್ದುಧರ ಬಿ.ಸಿ. ಎಸ್.ಎ.ಹುಸೇನ್, ತಮಟಗಾರ, ಐವನ್ ಡಿಸೋಜಾ, ರಮೇಶ್ ಕುಮಾರ್, ಮತ್ತು ವಿಜಯ್ ಮುಳಗುಂದ ಅವರ ಹೆಸರುಗಳಿವೆ ಎಂದು ಮೂಲಗಳು ತಿಳಿಸಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ