ನರೇಗಾ ಕಾಮಗಾರಿಯನ್ನು ಕ್ಯೂ ಆರ್ ಕೋಡ ಸ್ಕ್ಯಾನ್ ಮಾಡುವುದರ ಮುಖಾಂತರ ಪಡೆಯಬಹುದು

ಬಾಗಲಕೋಟ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಪಾರದಶ೯ಕತೆಯನ್ನು ಹೊಂದಿದ್ದು ಅದಕ್ಕೆ ಬಲ ತುಂಬಲು ಕ್ರಿಯಾ ಯೋಜನೆಯ ಪ್ರಕ್ರಿಯೆಯನ್ನು ಆನಲೈನಗೊಳಿಸಲಾಗಿದೆ ಎಂದು ಜಿ.ಪಂ ಸಿಇಒ ಶಶೀದರ ಕುರೇರ್ ಹೇಳಿದರು.
            ಜಿ.ಪಂ. ಸಭಾಭವನದಲ್ಲಿ 2025-26 ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆಯ ತಯಾರಿಕೆ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ನಿರ್ದೇಶನದಂತೆ ನಿಗದಿತ ವೇಳಾಪಟ್ಟಿ ಅನ್ವಯ ಕ್ರಿಯಾ ಯೋಜನೆಗೆ ಸಿದ್ಧಮಾಡಿಕೊಳ್ಳಲಾಗಿದೆ. ಈ ಬಾರಿಯ ಕ್ರಿಯಾ ಯೋಜನೆಯ ಪ್ರಕ್ರಿಯೆ ಸಂಪೂರ್ಣ ಆನಲೈನದಿಂದ ಕೂಡಿರುತ್ತದೆ. ಗ್ರಾಮೀಣ ಜನರು ತಮಗಿಷ್ಟವಾದ ಕಾಮಗಾರಿಯನ್ನು ಕ್ಯೂ ಆರ್ ಕೋಡ ಸ್ಕ್ಯಾನ್ ಮಾಡುವುದರ ಮುಖಾಂತರ ಕಾಮಗಾರಿ ಹೊಂದಲು ಅವಕಾಶವಿದೆ ಎಂದರು.
             ಆಫಲೈನ ಮುಖಾಂತರವು ಕಾಮಗಾರಿ ಬೇಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸ್ವೀಕೃತವಾದ ಬೇಡಿಕೆಗಳನ್ನು ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪೂರ್ವ ಅಳತೆಗೈದು ಅನುಮೋದನೆ ನೀಡುತ್ತಾರೆ. ಅಧಿಕಾರಿಗಳು ಕಾಮಗಾರಿ ಬೇಡಿಕೆ ಅಜಿ೯ಗಳನ್ನು ಪರಿಶೀಲಿಸಿ ಆನಲೈನ ಕಾಮಗಾರಿ ಬೇಡಿಕೆಯನ್ನು ಹೊಂದುವ ಬಗೆಗೆ ಕುರಿತು ಮಾಹಿತಿ, ಶಿಕ್ಷಣ, ಸಂವಹನ ಚಟುವಟಿಕೆಗಳ ಮುಖಾಂತರ ಇನ್ನಷ್ಟು ವ್ಯಾಪಕ ಪ್ರಚಾರವನ್ನು ಕೈಗೊಳ್ಳಲು ಬ್ಯಾನರ ಅಳವಡಿಸಲಾಗಿದೆ ಎಂದರು.
            ಗ್ರಾ.ಪಂ ಸಿಬ್ಬಂದಿ ಕರ ಪತ್ರಗಳ ಮುಖಾಂತರ ಮನೆ ಮನೆಗೆ ತೆರಳಿ ಈ ಬಗೆಗೆ ಇನ್ನಷ್ಟು ಪರಿಣಾಮವಾಗಿ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು. 
             ಉಪ ಕಾರ್ಯದರ್ಶಿಗಳಾದ ಎನ್.ವೈ. ಬಸರಿಗಿಡದ ಮಾತನಾಡಿ ಸರ್ಕಾರ ನೀಡಿದ ವೇಳಪಟ್ಟಿ ಅನ್ವಯ ವಾಡ೯ ಸಭೆ, ಗ್ರಾಮ ಸಭೆಗಳನ್ನು ಕೈಗೊಳ್ಳಬೇಕು. ಗ್ರಾಮ ಸಭೆಯ ವಿವರಗಳನ್ನು ಕಡ್ಡಾಯವಾಗಿ ಅನಲೈನನಲ್ಲಿ ಭರ್ತಿ ಮಾಡಬೇಕೆಂದರು. ಕ್ರಿಯಾಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಿಬ್ಬಂದಿಗಳು ಶ್ರಮಿಸಬೇಕೆಂದರು.
ಕ್ರಿಯಾ ಯೋಜನೆಯಲ್ಲಿ ಮಾಹಿತಿ, ಶಿಕ್ಷಣ, ಸಂವಹನದ ಮಹತ್ವವನ್ನು ಡಿ.ಐ.ಇ.ಸಿ. ಅಜೇಯ ಸೂಳಿಕೇರಿ ತಿಳಿಸಿದರು. 
             ಕ್ರಿಯಾ ಯೋಜನೆಯ ತಯಾರಿಕೆ ವಿವಿಧ ಹಂತಗಳ ಬಗ್ಗೆ ಎ.ಡಿ.ಪಿ.ಸಿ. ರಾಜೇಶ್ವರಿ ಗಡೇದ ಮಾಹಿತಿ ನೀಡಿದರು. ಅನಲೈನ ಮುಖಾಂತರ ಕಾಮಗಾರಿ ಬೇಡಿಕೆಯನ್ನು ಸಲ್ಲಿಸುವ ಕುರಿತು ಡಿ.ಎಮ್.ಆಯ್.ಎಸ್. ಉಜ್ವಲ ಪ್ರಾತಕ್ಷಿತೆ ನೀಡಿದರು. ತಾಂತ್ರಿಕ ವಿಷಯಗಳ ಕುರಿತು ಬಾಹುಬಲಿ ಹಾಗೂ ಸಿದ್ದಯ್ಯ ಹಿರೇಮಠ ವಿಷಯ ಮಂಡಿಸಿದರು. ಜಿಲ್ಲಾ ಹಾಗೂ ತಾಲೂಕ ಮಟ್ಟದ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೆಶಕರು, ನರೇಗಾ ಸಿಬ್ಬಂದಿ ಹಾಜರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ