ಗ್ಯಾರಂಟಿ ಯೋಜನೆಯ ಹಣದಿಂದ ₹30 ಸಾವಿರ ಮೌಲ್ಯದ ಬೆಳ್ಳಿ ಆರತಿ ಖರೀದಿ

ಗ್ಯಾರಂಟಿ ಯೋಜನೆಯ ಹಣದಿಂದ ₹30 ಸಾವಿರ ಮೌಲ್ಯದ ಬೆಳ್ಳಿ ಆರತಿ ಖರೀದಿ

ಶಾಸಕ ಉಮೇಶ್ ಮೇಟಿಗೆ ಆರತಿ ಬೆಳಗಿದ ರುದ್ರವ್ವ ಕೈರವಾಡಗಿ

ಬಾಗಲಕೋಟೆ, ಮೇ 20: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿರುವ ಹಣವನ್ನು ಸಂಗ್ರಹಿಸಿ ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮದ ರುದ್ರವ್ವ ಕೈರವಾಡಗಿ ಅವರು ₹30 ಸಾವಿರ ಮೌಲ್ಯದ ಬೆಳ್ಳಿ ಆರತಿ ಖರೀದಿ ಮಾಡಿ ಶಾಸಕ ಉಮೇಶ್ ಮೇಟಿ ಅವರಿಗೆ ಆರತಿ ಬೆಳಗಿದರು.

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುತ್ತಿರುವ ₹2,000 ಹಣವನ್ನು 15 ತಿಂಗಳುಗಳ ಕಾಲ ಉಳಿಸಿಕೊಂಡು ಬೆಳ್ಳಿ ಆರತಿ ಖರೀದಿಸಿರುವುದು ಗ್ರಾಮದಲ್ಲಿ ಗಮನ ಸೆಳೆದಿದೆ. ಶಾಸಕ ಉಮೇಶ್ ಮೇಟಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ರುದ್ರವ್ವ ಕೈರವಾಡಗಿ ಅವರು ಹೊಸದಾಗಿ ಖರೀದಿಸಿದ ಬೆಳ್ಳಿ ಆರತಿಯಿಂದ ಆರತಿ ಬೆಳಗಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, “ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದುಕು ಸಾಗಿಸಲು ಸಾಧ್ಯವಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ದೊರೆತಿದ್ದು, ಕುಟುಂಬದ ನಿರ್ಧಾರಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ,” ಎಂದು ಹೇಳಿದರು.

“ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ನಾಲ್ಕು ಕೋಟಿಗೂ ಹೆಚ್ಚು ಜನರು ಫಲಾನುಭವಿಗಳಾಗಿದ್ದಾರೆ. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದವರು ಇಂದು ಬೇರೆ ರಾಜ್ಯಗಳಲ್ಲಿಯೂ ಇದೇ ರೀತಿಯ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ,” ಎಂದು ತಿಳಿಸಿದರು.

ಬಾಗಲಕೋಟೆ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಶಾಸಕ ಉಮೇಶ್ ಮೇಟಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿರುವುದು ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮಸ್ಥರು ಕೂಡ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜೀವನದಲ್ಲಿ ಬದಲಾವಣೆ ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ, ಮಲ್ಲಿಕಾರ್ಜುನ ಮೇಟಿ, ಜಿ.ಜಿ. ಮಾಗನೂರ, ಎಸ್.ಜಿ. ಮಾಗನೂರ, ಆರ್.ಎಸ್. ವೈಜಾಪುರ, ಎಸ್.ವೈ. ಶಿರೂರು, ಮುದಿಯಪ್ಪ ಕಾಳಿ, ಗ್ಯಾನಪ್ಪ ಚಲವಾದಿ, ಸಂಗಣ್ಣ ಶಿರೂರು, ಕುಬ್ಬಣ್ಣ ಪೂಜಾರಿ, ವೈ.ವೈ. ತಿಮ್ಮಾಪುರ, ನಿಂಗಣ್ಣ ಕೋಟಿ, ರಮೇಶ್ ಕೊಳ್ಳರ, ಎಸ್.ಎನ್. ರಾಂಪುರ, ಲಕ್ಸಣ್ಣ ದಡ್ಡಿ, ಮಂಜುಳಾ ಕಮತಗಿ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ