ಸಿದ್ದನಕೊಳ್ಳ ಸಿದ್ದಪ್ಪಜ್ಜನವರ ಆಶೀರ್ವಾದ ಪಡೆದ ಶಾಸಕ ಉಮೇಶ್ ಮೇಟಿ
ಬಾಗಲಕೋಟೆ, ಮೇ 16: ಬಾಗಲಕೋಟೆ ಕ್ಷೇತ್ರದ ಶಾಸಕ ಉಮೇಶ್ ಮೇಟಿ ಅವರು ಸಿದ್ದನಕೊಳ್ಳದ ಶ್ರೀ ಸಿದ್ದಪ್ಪಜ್ಜನವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಬಳಿಕ ಸಿದ್ದನಕೊಳ್ಳಕ್ಕೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಗೆ ಶಕ್ತಿ ಮತ್ತು ಮಾರ್ಗದರ್ಶನ ದೊರೆಯಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸಿದ್ದಣ್ಣ ಮೇಟಿ, ಬಿ.ಸಿ. ಅಂಟ್ರದಾನಿ, ಸಂಗಣ್ಣ ಹಂಡಿ, ಮುತ್ತಣ್ಣ ಮುಳೂರ, ಸುರೇಶ್ ರಾಜೂರ, ರಾಮನಗೌಡ ಮಾಚ, ಹನುಮಂತ ಕೊಂತ್, ಶರಣಪ್ಪ ಗೋಳಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ