ಬಾಗಲಕೋಟೆ ಮತಕ್ಷೇತ್ರದ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿರುವ ಶಾಸಕ ಉಮೇಶ್ ಮೇಟಿ

ಬಾಗಲಕೋಟೆ, ಮೇ 19: ಬಾಗಲಕೋಟೆ ಮತಕ್ಷೇತ್ರದ ಶಾಸಕ ಉಮೇಶ್ ಮೇಟಿ ಅವರು ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿರುವುದು ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಶಾಸಕ ಉಮೇಶ್ ಮೇಟಿ ಅವರು ಸಾರ್ವಜನಿಕರು ಎದುರಿಸುತ್ತಿರುವ ಕುಡಿಯುವ ನೀರು, ರಸ್ತೆ, ಸಾರಿಗೆ, ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದಲೇ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಗ್ರಾಮಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಜನರ ಅಭಿಪ್ರಾಯಗಳನ್ನು ಕೇಳಿ ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಸೂಚನೆ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಸೀತಿಮನಿ ಎಲ್.ಟಿ ಗ್ರಾಮದಲ್ಲಿ ಬಸ್‌ಗಳು ನಿಲ್ಲದೇ ಹೋಗುತ್ತಿರುವ ಸಮಸ್ಯೆಯನ್ನು ಗ್ರಾಮಸ್ಥರು ಶಾಸಕ ಉಮೇಶ್ ಮೇಟಿ ಅವರ ಗಮನಕ್ಕೆ ತಂದರು. ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ಪ್ರತಿದಿನ ಬಸ್ ಸೌಲಭ್ಯಕ್ಕಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು. ಬಾಗಲಕೋಟೆ–ಮುದ್ದೇಬಿಹಾಳ ಮಾರ್ಗದ ಬಸ್‌ಗಳು ಸೀತಿಮನಿ ಎಲ್.ಟಿ ಗ್ರಾಮದಲ್ಲಿ ನಿಲ್ಲದೇ ಹೋಗುತ್ತಿರುವುದರಿಂದ ಸಂಚಾರದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಸೀತಿಮನಿ ಗ್ರಾಮದಿಂದ ರಾಂಪುರ ಹಾಗೂ ನಿಡಗುಂದಿ ಕಡೆಗೆ ತೆರಳುವ ಜನರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಬಸ್‌ಗಳನ್ನು ಕಡ್ಡಾಯವಾಗಿ ಗ್ರಾಮದಲ್ಲಿ ನಿಲ್ಲಿಸುವಂತೆ ಸಾರ್ವಜನಿಕರು ಆಗ್ರಹಿಸಿದರು. ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕ ಉಮೇಶ್ ಮೇಟಿ, ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಉಮೇಶ್ ಮೇಟಿ, “ನಮ್ಮ ಬಾಗಲಕೋಟೆ ಮತಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದ್ದೇನೆ. ಕ್ಷೇತ್ರದಲ್ಲಿ ಯಾವ ಯಾವ ಕಾಮಗಾರಿಗಳು ಅಗತ್ಯವಿವೆ ಎಂಬುದರ ಕುರಿತು ಈಗಾಗಲೇ ಪಟ್ಟಿ ತಯಾರಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಾಗುವುದು,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಂಪುರ, ರಾಂಪುರ ಪು.ಕ, ಅಲೂರು, ಮಸ್ತಿಹಾಳ, ಸೀತಿಮನಿ R.C, ಸೀತಿಮನಿ ತಾಂಡಾ, ಸೀತಿಮನಿ, ಚಿಕ್ಕಗುಳಬಾಳ, ಗುಳಬಾಳ, ಮುತ್ತತಿ, ಗುಳಬಾಳ ತಾಂಡಾ ಹಾಗೂ ಜಡ್ರಾಮಕುಂಟಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಉಮೇಶ್ ಮೇಟಿ ಅವರಿಗೆ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದರು. ವಿವಿಧ ಗ್ರಾಮಗಳ ಜನರು ಅಪಾರ ಬೆಂಬಲ ಹಾಗೂ ಆಶೀರ್ವಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ, ಎಸ್.ಎನ್. ರಾಂಪುರ, ಬಲರಾಮ ಪವರ್, ಶಿವಾನಂದ ಅಫ್ಜಲಪುರ, ಮುದಕಪ್ಪ ಕೊಣ್ಣೂರ, ಮಲ್ಲಿಕಾರ್ಜುನ ಮೇಟಿ, ಶಶಿಕಾಂತ ಪೂಜಾರ, ಶ್ರೀಕರ್ ದೇಸಾಯಿ .ವೈ. ತಿಮ್ಮಾಪುರ, ಮಲ್ಲು ದ್ಯಾವನವರ, ಅಶೋಕ್ ಮೇಟಿ, ಅರುಣ ಹಿರೇಮಠ, ಮುತ್ತು ಗೌಡರ, ಶಂಕರ ಇಂಗಳೇ, ಕೃಷ್ಣ ಲಮಾಣಿ, ಅಪ್ಪಣ್ಣ ಇಂಗಳೇಶ್ವರ, ಅರ್ಜುನ್ ನಾಯಕ್, ರಮೇಶ್ ರಾಠೋಡ್, ಸತೀಶ್ ಲಮಾಣಿ, ರಾಯಪ್ಪ ವಾಲಿಕಾರ, ಬಸವರಾಜ್ ಕೊಳಮಲಿ, ಶಿವ ವಾಲಿಕಾರ, ರಮೇಶ್ ಗೌಡರ್, ರಮೇಶ್ ಜೈಗುಂಡಾರ ಹಾಗೂ ನಾಗನಗೌಡ ಗೌಡರ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ