ಸ್ವಯಂ ಉದ್ಯೋಗಕ್ಕೆ ಉತ್ತೇಜನ: 21 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದ ಶಾಸಕ ಉಮೇಶ್ ಮೇಟಿ

ನವನಗರ, ಜೂನ್ 8: 2024-25ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿ ಕ್ಷೇತ್ರದ ಶಾಸಕ ಉಮೇಶ್ ಮೇಟಿ ಅವರು 21 ಮಹಿಳೆಯರಿಗೆ ಉಷಾ ಕಂಪನಿಯ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ಯೋಜನೆಯ ಫಲಾನುಭವಿಗಳಾದ ನೇತ್ರಾ ಸಾಲಿ, ಯಮನವ್ವ ಗೌಡರ, ಮಹಾದೇವಿ ತುಂಬರಮಟ್ಟಿ, ಶ್ರೀದೇವಿ ಆಡಿನ, ಸಾವಿತ್ರಿ ಮುತ್ತಗಿ, ಮುತ್ತವ್ವ ಕಡೂರು ಸೇರಿದಂತೆ 21 ಮಹಿಳೆಯರು ಹೊಲಿಗೆ ಯಂತ್ರಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ತಮ್ಮದೇ ಆದ ಉದ್ಯೋಗ ಆರಂಭಿಸಲು ಇಂತಹ ಯೋಜನೆಗಳು ಸಹಕಾರಿಯಾಗಲಿದ್ದು, ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಲು ನೆರವಾಗಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯವಸ್ಥಾಪಕರಾದ ಜೀವನ್ ಪ್ರಸಾದ್ ಅವರು ನಿರೂಪಣೆ ಮಾಡಿದರು. ತಾಲ್ಲೂಕು ಸಹಾಯಕ ಅಭಿವೃದ್ಧಿ ಅಧಿಕಾರಿ ರಂಜಾನಬಿ ವಾಲಿಕಾರ್ ಉಪಸ್ಥಿತರಿದ್ದರು. ಎಸ್.ಎನ್. ರಾಂಪುರ, ದ್ಯಾಮಣ್ಣ ಗಾಲಿ, ಸಂಗಣ್ಣ ಹಂಡಿ, ಅಕ್ಬರ್ ಮುಲ್ಲಾ, ಬಸವಂತಪ್ಪ ಅಂತಾರತನಿ, ಶಶಿಕಾಂತ್ ಪೂಜಾರ್ ಹಾಗೂ ರಜಾಕ್ ಬೆನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ