ಹಾಲುಮತ ನೌಕರರ ಸಂಘದ ನೂತನ ಪದಾಧಿಕಾರಿಗಳಿಗೆ ಶಾಸಕ ಉಮೇಶ್ ಮೇಟಿ ಸನ್ಮಾನ
ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಹಾಲುಮತ ನೌಕರರ ಸಂಘದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಶಾಸಕ ಉಮೇಶ್ ಮೇಟಿ ಸನ್ಮಾನಿಸಿ ಅಭಿನಂದಿಸಿದರು.
ಸಂಘದ ನೂತನ ಕಾರ್ಯಕಾರಿಣಿ ಸಮಿತಿಯ ಪದಾಧಿಕಾರಿಗಳನ್ನು ಆಹ್ವಾನಿಸಿ ಗೌರವಿಸಿದ ಅವರು, ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಸಂಘವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಆಶಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಂಘದ ನಿರ್ಧಾರ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎನ್.ಬಿ. ಗೊರವರ, ಅಧ್ಯಕ್ಷ ಎಸ್.ಎಚ್. ಘಂಟಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಡೂರ, ಕಾರ್ಯಾಧ್ಯಕ್ಷ ಡಾ. ಎಂ.ಎನ್. ಸಿದ್ದಲಿಂಗಪ್ಪನವರ, ಕೋಶಾಧ್ಯಕ್ಷ ಎಸ್.ಪಿ. ಬಗಲಿ, ಉಪಾಧ್ಯಕ್ಷರಾದ ಡಾ. ವಿಠ್ಠಲ ದಳವಾಯಿ, ಪಿ.ಬಿ. ಗುದಗಿ, ಎಂ.ವೈ. ಹುಲ್ಯಾಳ, ರಾಜೇಶ್ವರಿ ಬಾದವಾಡಗಿ, ಧರ್ಮಣ್ಣ ಯತ್ನಟ್ಟಿ, ಡಾ. ಎಸ್.ಬಿ. ಹುಲ್ಯಾಳ, ಸೋಮಲಿಂಗ ನೋಟಗಾರ ಹಾಗೂ ಉಮೇಶ ಮಹಾರಾಜನವರ ಉಪಸ್ಥಿತರಿದ್ದರು.
ಹಾಗೆಯೇ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ರಮೇಶ ಮಾಯಪ್ಪನವರ, ರಾಜು ಅಜ್ಜೋಡಿ, ಸಹ ಕಾರ್ಯದರ್ಶಿಗಳಾದ ವಿಠ್ಠಲ ಮೊಕಾಶಿ, ಎಸ್.ಕೆ. ಬೆಳವಲದ, ಸಂಘಟನಾ ಕಾರ್ಯದರ್ಶಿಗಳಾದ ರತ್ನಾ ಪದರಾ, ಕೆ.ಎಲ್. ಕಳ್ಳೆನ್ನವರ, ಕೆ.ಎಂ. ಮಾಗುಂಡಪ್ಪನವರ, ಡಿ.ಪಿ. ಗೌಳಿ ಸೇರಿದಂತೆ ಕಾರ್ಯಕಾರಿಣಿಯ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಸವಂತಪ್ಪ ಮೇಟಿ, ಲಕ್ಷ್ಮಣ ದಡ್ಡಿ, ಶಶಿಕಾಂತ ಪೂಜಾರ, ಶ್ರೀಕರ ದೇಸಾಯಿ, ರಾಯಪ್ಪ ವಾಲಿಕಾರ, ಬಸವರಾಜ ತಳಗಿ, ಮುತ್ತಪ್ಪ ಹುಗ್ಗಿ ಹಾಗೂ ಸಮಾಜದ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ