ಮೀನುಗಾರರಿಗೆ ಮೀನು ಸಲಕರಣೆ ಕಿಟ್ ವಿತರಿಸಿದ:ಶಾಸಕ ಉಮೇಶ್ ಮೇಟಿ

ಬಾಗಲಕೋಟೆ: 2025-26ನೇ ಸಾಲಿನ ರಾಜ್ಯ ವಲಯದ ಒಳನಾಡು ಮೀನುಗಾರರಿಗೆ ಮೀನು ಸಲಕರಣೆ ಕಿಟ್ ವಿತರಣೆ ಯೋಜನೆಯಡಿ ಬದಾಮಿ ವಲಯದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಆರು ಫಲಾನುಭವಿಗಳಿಗೆ ಶಾಸಕ ಉಮೇಶ್ ಎಚ್. ಮೇಟಿ ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಮೀನು ಸಲಕರಣೆ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೀನುಗಾರರ ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಮೀನುಗಾರರ ಜೀವನಮಟ್ಟ ಸುಧಾರಣೆಗೆ ಅಗತ್ಯ ನೆರವು ಹಾಗೂ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದರು.

ಯೋಜನೆಯಡಿ ಬೊಮ್ಮಣಿ ಗ್ರಾಮದ ಕಸ್ತೂರಿ ರಾಮೋಡಗಿ, ಹಿರೇಗುಳಬಾಳ ಗ್ರಾಮದ ಶೇಖರಪ್ಪ ವಾಲಿಕಾರ್, ಹಿರೇಮ್ಯಾಗೇರಿ ಗ್ರಾಮದ ಬಸಪ್ಪ ಮಾದರ, ಕಮತಗಿ ಪಟ್ಟಣದ ಧನಸಿಂಗ್ ರಾಠೋಡ್, ಲಕ್ಷ್ಮೀಬಾಯಿ ರಾಠೋಡ್ ಹಾಗೂ ರಂಗಪ್ಪ ಕವಾಳಿ ಅವರಿಗೆ ಮೀನು ಸಲಕರಣೆ ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವಂತಪ್ಪ ಮೇಟಿ, ದ್ಯಾಮಣ್ಣ ಗಾಳಿ,ಅಶೋಕ್ ಪಟಣ್ಣದ್ , ಬಸುರಾಜ್ಕ ಟಗೇರಿ, ಜಟ್ಟಪ್ಪ ಮಾದಾಪುರ, ಹನುಮಂತ ಗಣಿ, ಹಣಮಂತ ಬಳಗಾರ, ಬಲರಾಮ ಪವಾರ್ ಸೇರಿದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ