ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಉಮೇಶ ಮೇಟಿ
ಬಾಗಲಕೋಟೆ, ಆ.9: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಶಿಕ್ಷಣದ ಜತೆಗೆ ಸಂಸ್ಕಾರ, ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಉಮೇಶ ಮೇಟಿ ಹೇಳಿದರು.
ನಗರದ ಶಿವಾನುಭವ ಕಲ್ಯಾಣ ಮಂಟಪ ಚರಂತಿಮಠದಲ್ಲಿ ಬಣಜಿಗ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಸಾಧನೆಯ ಹಿಂದೆ ತಂದೆ-ತಾಯಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಮಾಜದ ಪ್ರೋತ್ಸಾಹವಿದೆ. ಮಕ್ಕಳನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡದೆ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕು. ಇಂದು ದೊರೆತಿರುವ ಪುರಸ್ಕಾರ ಸಾಧನೆಯ ಅಂತ್ಯವಲ್ಲ; ಮುಂದಿನ ದೊಡ್ಡ ಸಾಧನೆಗೆ ಇದು ಮೊದಲ ಹೆಜ್ಜೆಯಾಗಬೇಕು’ ಎಂದರು.
ಬಣಜಿಗ ಸಮಾಜವು ಶಿಕ್ಷಣ, ವ್ಯಾಪಾರ, ಉದ್ಯಮ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದೆ. ಯುವ ಪೀಳಿಗೆ ಈ ಪರಂಪರೆಯನ್ನು ಮುಂದುವರಿಸಿ ಸಮಾಜದ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಸದ್ಗುರು ಡಾ. ಎ.ಸಿ. ವಾಲಿ ಮಹಾರಾಜರು, ವೀರಭದ್ರಪ್ಪ ಅಂಗಡಿ, ಪ್ರಕಾಶ್ ತಪಶೆಟ್ಟಿ, ಬಸವರಾಜ ಕಟಗೇರಿ, ರಾಜು ಕೊಳಲಗಿ, ಬಸವರಾಜ ಚಿನಿವಾಲರ, ರವಿ ಕುಮಟಗಿ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ