ಸಿಡಿಲು ಬಡಿದು ಮೂವರು ಸಾವು; ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ

ಬಾಗಲಕೋಟೆ, ಸೆ.26: ಐಹೊಳೆ ಗ್ರಾಮದ ಹೊಲದಲ್ಲಿ ಸೂರ್ಯಕಾಂತಿ ರಾಶಿ ಮಾಡಲು ತೆರಳಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಹಾಗೂ ಬಾಗಲಕೋಟೆ ತಾಲೂಕಿನ ವಿದ್ಯುತ್ ಸ್ಪರ್ಶದಿಂದ ಒಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಮೃತರನ್ನು ಕುಷ್ಟಗಿ ತಾಲೂಕಿನ ಕಾಟಾಪುರ ಗ್ರಾಮದ ಭರಮಪ್ಪ ತಂದೆ ಯಲ್ಲಪ್ಪ ಖಂಡೇಕರ (25), ಐಹೊಳೆ ಗ್ರಾಮದ ರಾಮವ್ವ ಗಂಡ ದ್ಯಾಮಪ್ಪ ಹೊಳಗಿ (65) ಹಾಗೂ ಬಾಗಲಕೋಟೆ ತಾಲೂಕಿನ ನಿವಾಸಿ ಹಾಜಿ ಮಲಗ ಶೇಖ್ (47) ಎಂದು ಗುರುತಿಸಲಾಗಿದೆ.

ಸಿಡಿಲು ಬಡಿದು ಮೃತಪಟ್ಟ ಮೂವರ ಕುಟುಂಬಗಳಿಗೆ ಸರ್ಕಾರದ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ತಲಾ ₹5 ಲಕ್ಷದಂತೆ ಪರಿಹಾರ ಮಂಜೂರು ಮಾಡಲಾಗಿದ್ದು, ಒಟ್ಟು ₹15 ಲಕ್ಷ ಪರಿಹಾರ ಮೊತ್ತವನ್ನು ಒಂದೇ ಸಂದರ್ಭದಲ್ಲಿ ಚೆಕ್ ಮೂಲಕ ಕುಟುಂಬಸ್ಥರಿಗೆ ವಿತರಿಸಲಾಯಿತು.

ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಅವರು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಪರಿಹಾರದ ಚೆಕ್‌ಗಳನ್ನು ವಿತರಿಸಿದರು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಗದ್ದೆಗೌಡ, ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಡಿ.ಎಸ್. ಯತ್ನಟ್ಟಿ, ಬಾಯಕ್ಕ ಮೇಟಿ, ಮುತ್ತಣ್ಣ ಮೂಳೂರು, ಶರಣಪ್ಪ ಗೋಡಿ, ಪರಶುರಾಮ ಕುರಿ, ಬಿ.ಸಿ. ಅಂತರದಾನಿ ಹಾಗೂ ಬಾಲಪ್ಪ ಕುರಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ